ಬೆಂಗಳೂರಿನಲ್ಲಿ 2.75 ಲಕ್ಷ ಬೀದಿ ನಾಯಿಗಳು: BBMP

masthmagaa.com:

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗಿದೆ ಅಂತ ತಿಳಿದು ಬಂದಿದೆ. 2019ರ ಗಣತಿ ನಂತರ 29,645 ನಾಯಿಗಳು ಕಡಿಮೆಯಾಗಿವೆ. ಇನ್ನು ಬಿಬಿಎಂಪಿ ವ್ಯಾಪ್ತಿಯ ಎಲ್ಲ 8 ವಲಯಗಳಲ್ಲಿ ಒಟ್ಟು 2,79,355 ಬೀದಿ ನಾಯಿಗಳಿವೆ. ಪಶುಸಂಗೋಪನಾ ಇಲಾಖೆಯ ಪ್ರಕಾರ ಬೆಂಗಳೂರಿನ ಪೂರ್ವ ವಲಯದಲ್ಲಿ ಅತಿಹೆಚ್ಚು ಅಂದ್ರೆ ಸುಮಾರು 48 ಸಾವಿರ ಬೀದಿ ನಾಯಿಗಳಿವೆ. ಪಶ್ಚಿಮ ವಲಯದಲ್ಲಿ 45 ಸಾವಿರ ನಾಯಿಗಳಿದ್ರೆ, ದಕ್ಷಿಣ ವಲಯದಲ್ಲಿ 30 ಸಾವಿರ ಬೀದಿ ನಾಯಿಗಳಿವೆ. ಅಂದ್ಹಾಗೆ ಬಿಬಿಎಂಪಿ ಮತ್ತು ಪಶುಸಂಗೋಪನಾ ಇಲಾಖೆಯ ಸಿಬ್ಬಂದಿ ಜೊತೆಗೂಡಿ ಬೀದಿ ನಾಯಿಗಳ ಗಣತಿಯನ್ನ ನಡೆಸಿವೆ. ತಲಾ ಇಬ್ಬರು ಸಿಬ್ಬಂದಿಯನ್ನ ಒಳಗೊಂಡ 50 ತಂಡಗಳಿಂದ ಗಣತಿ ನಡೆಸಲಾಗಿದೆ.

-masthmagaa.com

Contact Us for Advertisement

Leave a Reply