ಬೆಂಗಳೂರು ಟೆರಲ್‌ ಫೈಲ್ಸ್! ಸ್ಪೋಟಕ್ಕೆ ಸರ್ವ ತಯಾರಿ! ಜೈಲಿಂದಲೇ ಫೋನ್‌!

masthmagaa.com:

ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿ ಪೊಲೀಸ್‌ ವಶದಲ್ಲಿರೋ ಐವರು ಶಂಕಿತ ಉಗ್ರರಿಂದ 12 ಮೊಬೈಲ್‌ಗಳನ್ನ ವಶಪಡಿಸಿಕೊಳ್ಳಲಾಗಿತ್ತು. ಅದರಿಂದ ಈಗ ಸುಮಾರು 300 ಜಿ.ಬಿ ಡೇಟಾ ರಿಟ್ರೈವ್‌ ಮಾಡಿರೋದಾಗಿ ಸಿಸಿಬಿ ಪೊಲೀಸರು ಹೇಳಿದ್ದಾರೆ. ಆ ಡೇಟಾದಲ್ಲಿ ಹಲವು ಬೆಚ್ಚಿಬೀಳಿಸುವ ಅಂಶಗಳು ಹೊರಬಿದ್ದಿವೆ. ನಗರದಲ್ಲಿ ಸ್ಫೋಟ ಮಾಡೋಕೆ ಹಾತೊರೆಯುತ್ತಿದ್ದ ಟಿ.ನಾಸೀರ್, ಪರಪ್ಪನ ಅಗ್ರಹಾರ ಜೈಲಿನಿಂದ ಜುಲೈ16 ಹಾಗೂ 17ರಂದು ಶಂಕಿತ ಉಗ್ರ ಮಹಮ್ಮದ್‌ ಉಮರ್‌ಗೆ ಹಲವು ಬಾರಿ ಕರೆ ಮಾಡಿದ್ದ. ಈ ವೇಳೆ ನಾವೆಲ್ಲರೂ ಸೇರಿ ಧರ್ಮ ರಕ್ಷಿಸಬೇಕು, ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡಬೇಕು. ಎಲ್ಲ ಸ್ಫೋಟಕ ಸಿದ್ಧವಾಗಿಟ್ಟುಕೊಳ್ಳಿ. ಯಾವ ಸ್ಥಳದಲ್ಲಿ ಸ್ಫೋಟ ನಡೆಸಬೇಕು ಅನ್ನೋದನ್ನ ಹೇಳ್ತೀನಿ ಅಂದಿದ್ದ, ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ದಾಳಿ ಮಾಡಿದ್ದರಿಂದ ಅನಾಹುತ ತಪ್ಪಿದೆ ಅಂತ ಪೊಲೀಸ್‌ ಅಧಿಕಾರಿಯೊಬ್ರು ಹೇಳಿದ್ದಾರೆ. ಇನ್ನು ಶಂಕಿತ ಉಗ್ರ ಜಾಹೀದ್ ಮನೆಯಲ್ಲಿ 4 ಸ್ಫೋಟಕಗಳು ಸಿಕ್ಕಿದ್ವು. ಅವು ವಿದೇಶದಿಂದ ಕೊರಿಯರ್ ಮೂಲಕ ತರಿಸಲಾಗಿತ್ತು ಅನ್ನೋದು ಈಗ ತನಿಖೆಯಿಂದ ಗೊತ್ತಾಗಿದೆ. ಜೊತೆಗೆ ಟಿ. ನಾಸೀರ್ ಹಾಗೂ ಶಂಕಿತ ಉಗ್ರರು, ಸಂಭಾಷಣೆ ಸಂದರ್ಭದಲ್ಲಿ ತಮ್ಮದೇ ಕೋಡ್‌ಗಳನ್ನು ಬಳಸಿದ್ದಾರೆ. ಅವುಗಳ ಅರ್ಥವೇನು ಅನ್ನೋದನ್ನ ಶಂಕಿತರ ಮೂಲಕ ತಿಳಿಯಲಾಗುತ್ತಿದೆ. ಸ್ಫೋಟಕ ಖರೀದಿ ವ್ಯವಹಾರ, ಸ್ಫೋಟಕ ಸಂಗ್ರಹ ಹಾಗೂ ಸ್ಫೋಟದ ಸ್ಥಳಗಳನ್ನ ಗುರುತಿಸುವ ವಿಚಾರವಾಗಿ ಕೋಡ್ ಬಳಸಿ ಮಾತನಾಡಿರುವ ಅನುಮಾನವಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply