ಗಾಜಾದಲ್ಲಿ ಯುದ್ದವನ್ನ ಮುಂದುವರೆಸುತ್ತೇವೆ ಅಂದ ಇಸ್ರೇಲ್‌ ಪ್ರಧಾನಿ!

masthmagaa.com:

ಇಸ್ರೇಲ್‌ ಹಮಾಸ್‌ ಯುದ್ಧದಲ್ಲಿ ಕದನವಿರಾಮ ತರೋ ಬಗ್ಗೆ ಮಾತುಗಳು ಕೇಳಿಬಂದಿದ್ವು. ಆದ್ರೆ ಇದೀಗ ಈ ಬಗ್ಗೆ ತುಟಿ ಬಿಚ್ಚಿರೋ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ʻಇಸ್ರೇಲ್‌ ತನ್ನ ದಾಳಿಯನ್ನ ಕಂಟಿನ್ಯೂ ಮಾಡುತ್ತೆ. ರಫಾ ಸೇರಿದಂತೆ ದಕ್ಷಿಣ ಗಾಜಾದಲ್ಲಿ ನಮ್ಮ ದಾಳಿಯನ್ನ ಕಂಟಿನ್ಯೂ ಮಾಡ್ತೇವೆ ಅಂತ ನೇತನ್ಯಾಹು ಹೇಳಿದ್ದಾರೆ. ಅಂದ್ಹಾಗೆ ರಂಜಾನ್‌ ಮುನ್ನವೇ ಗಾಜಾ ಯುದ್ದದಲ್ಲಿ ಕದನ ವಿರಾಮ ಘೋಷಣೆ ಆಗ್ಬೇಕು. ಇದಕ್ಕೆ ಇಸ್ರೇಲ್‌ ಸಮ್ಮತಿ ನೀಡಿದೆ. ಆದ್ರೆ ಹಮಾಸ್‌ ಈ ಬಗ್ಗೆ ಮಾತಾಡ್ಬೇಕು ಅಷ್ಟೇ ಅಂತ ಅಮೆರಿಕ ನಿನ್ನೆಯಷ್ಟೇ ಹೇಳಿತ್ತು. ಅದ್ರ ಬೆನ್ನಲ್ಲೆ ನೆತನ್ಯಾಹು ಈ ಹೇಳಿಕೆ ನೀಡಿ, ಅಮೆರಿಕದ ಮಾತನ್ನ ತಳ್ಳಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply