ವಿದ್ಯುತ್‌ ಬಿಲ್‌ ಜಾಸ್ತಿ ಮಾಡುವಂತೆ ಸರ್ಕಾರಕ್ಕೆ ಎಸ್ಕಾಂಗಳ ಪ್ರಪೋಸಲ್!

masthmagaa.com:

ಸಂಪ್ರದಾಯದಂತೆ ಈ ವರ್ಷವೂ ವಿದ್ಯುತ್‌ ಪೂರೈಕಾ ಕಂಪನಿಗಳು, ಅಂದ್ರೆ ಎಸ್ಕಾಂಗಳು ವಿದ್ಯುತ್‌ ಬೆಲೆ ಜಾಸ್ತಿ ಮಾಡುವಂತೆ ಸರ್ಕಾರಕ್ಕೆ ಪ್ರಪೋಸಲ್‌ ನೀಡಿವೆ. ಅದ್ರಲ್ಲೂ ಬೆಂಗಳೂರಿನ ಬೆಸ್ಕಾಂ ಪ್ರತಿ ಯೂನಿಟ್‌ಗೆ 49 ಪೈಸೆ ಜಾಸ್ತಿ ಮಾಡ್ಬೇಕು ಅಂತ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (KERC) ಬಳಿ ಕೇಳಿದೆ. ಅಂದ್ಹಾಗೆ ಪ್ರತಿ ವರ್ಷ ವಿದ್ಯುತ್‌ ದರಗಳನ್ನ ರಿವೈಸ್‌ ಮಾಡಲಾಗತ್ತೆ. ಅಲ್ಲದೆ ಸಪ್ಲೈ, ಡಿಸ್ಟ್ರಿಬ್ಯುಷನ್‌ ಲಾಸ್‌ ಆಧಾರದ ಮೇಲೆ ವಿದ್ಯುತ್‌ ಖರೀಧಿ ಒಪ್ಪಂದ ಮಾಡ್ಕೊಂಡು, ಹೊಸ ದರಗಳನ್ನ ವಿಧಿಸಲಾಗತ್ತೆ.‌ ಸದ್ಯ ಗೃಹಜ್ಯೋತಿ ಯೋಜನೆ ಇರೋದ್ರಿಂದ, ಉಚಿತ ವಿದ್ಯುತ್‌ ಬಿಟ್ಟು, ಹೆಚ್ಚಿನ ವಿದ್ಯುತ್‌ ಬಳಕೆಗೆ ಮಾತ್ರ ಬಿಲ್‌ ಬರ್ತಿದೆ. ಬೆಲೆ ಜಾಸ್ತಿ ಆದ್ರೂ ಕೂಡ, ಎಷ್ಟು ಯೂನಿಟ್‌ ಫ್ರೀ ಇದೆಯೋ ಅದನ್ನ ಬಿಟ್ಟು ಉಳಿದ ವಿದ್ಯುತ್‌ ಬಳಕೆಗೆ ಅಪ್ಲೈ ಆಗುತ್ತೆ.

ಇನ್ನು ಅತ್ತ ಕೇಂದ್ರದಲ್ಲಿ ಪಿಎಂ ಮೋದಿ ʻಪಿಎಂ ಸೂರ್ಯಘರ್:‌ ಮುಫ್ತ್‌ ಬಿಜ್ಲಿ ಯೋಜನೆʼ ಅಂದ್ರೆ ಉಚಿತ ವಿದ್ಯುತ್‌ ಯೋಜನೆ ಆರಂಭಿಸೋದಾಗಿ ಹೇಳಿದ್ದಾರೆ. ಸೌರ ವಿದ್ಯುತ್‌ ಬಳಕೆಗೆ ಉತ್ತೇಜನ ಕೊಡೋಕಾಗಿ ಈ ಯೋಜನೆ ತರಲಾಗ್ತಿದೆ. ಇದ್ರಲ್ಲಿ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು ತಲಾ 300 ಯೂನಿಟ್‌ ಉಚಿತ ವಿದ್ಯುತ್‌ ಕೊಡೋ ಪ್ಲಾನ್‌ ಇದೆ. ಸುಮಾರು 75 ಸಾವಿರೋ ಕೋಟಿ ರೂಪಾಯಿಯನ್ನ ಈ ಸ್ಕೀಮ್‌ಗೆ ಖರ್ಚು ಮಾಡಲಾಗ್ತಿದೆ ಅಂತ ಪಿಎಂ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply