32ನೇ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿ ದಾಖಲೆ ಬರೆದ ಅಮೆರಿಕದ ಖ್ಯಾತ ಗಾಯಕಿ ಬೆಯೋನ್ಸ್‌!

masthmagaa.com:

ಲಾಸ್‌ ಏಂಜಲೀಸ್‌ನಲ್ಲಿ ನಡೆದ 65ನೇ ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಅಮೆರಿಕದ ಖ್ಯಾತ ಗಾಯಕಿ ಬೆಯೋನ್ಸ್‌ ಅವ್ರು 32ನೇ ಗ್ರ್ಯಾಮಿ ಪ್ರಶಸ್ತಿ ಪಡ್ಕೊಂಡಿದ್ದಾರೆ. ಇವರ ʻRenaissanceʼ ಆಲ್ಬಮ್‌ಗೆ ಪ್ರಶಸ್ತಿ ಬಂದಿದೆ. ಈ ಮೂಲಕ ಅತಿಹೆಚ್ಚು ಗ್ರ್ಯಾಮಿ ಪ್ರಶಸ್ತಿ ಪಡೆದ ಗಾಯಕಿಯಾಗಿ ಬೆಯೋನ್ಸ್‌ ಹೊರಹೊಮ್ಮಿದ್ದಾರೆ. ಜೊತೆಗೆ 31 ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದ ಜಾರ್ಜ್‌ ಸೋಲ್ಟಿ ಅವ್ರ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇತ್ತ ಬೆಂಗಳೂರು ಮೂಲದ ಮ್ಯೂಸಿಕ್​ ಕಂಪೋಸರ್​ ರಿಕ್ಕಿ ಕೇಜ್ ಅವ್ರಿಗೆ 3ನೇ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ‘ಡಿವೈನ್​ ಟೈಡ್ಸ್​’ ಆಲ್ಬಂಗೆ ಸ್ಟೀವರ್ಟ್ ಕೋಪ್​​ಲ್ಯಾಂಡ್​ ಹಾಗೂ ರಿಕ್ಕಿ ಕೇಜ್​ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ.

-masthmagaa.com

Contact Us for Advertisement

Leave a Reply