ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಾಣ!

masthmagaa.com:

ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಿಸೋಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆಂಧ್ರ ಪ್ರದೇಶದ ಚಂದ್ರಶೇಖರಪುರಂ ಮತ್ತು ಪೋಲಾವರಂ ನಡುವೆ 32 ಕಿಮೀ ಉದ್ದದ 6 ಲೇನ್ ಹೆದ್ದಾರಿ ಬರಲಿದೆ. 32 ಕಿಮೀ ಉದ್ದದ ಈ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ವಿಜಯವಾಡ ಎಕನಾಮಿಕ್‌ ಕಾರಿಡಾರ್‌ನ ಮಹತ್ವದ ಘಟ್ಟವಾಗಿದ್ದು, ಭಾರತಮಾಲಾ ಪರಿಯೋಜನಾ ಯೋಜನೆ ಅಡಿಯಲ್ಲಿ 1,292.65 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಈ ಯೋಜನೆಗೆ ಅನುಮೋದನೆ ನೀಡಿದ್ದಾರೆ ಅಂತ ಸಚಿವಾಲಯ ತಿಳಿಸಿದೆ.

-masthmagaa.com

Contact Us for Advertisement

Leave a Reply