ರಷ್ಯಾ​​ ಮಾಡ್ತಿರೋದು ನರಮೇಧನೇ: ಪುಟಿನ್ ವಿರುದ್ಧ ಗಂಭೀರ ಪದ ಬಳಸಿದ ಬೈಡೆನ್

masthmagaa.com:

ರಷ್ಯಾ ತನ್ನ ಯುದ್ಧವನ್ನ ಮುಂದುವರೆಸ್ತಾ ಇದ್ದಂಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಪುಟಿನ್‌ ಸೇನೆ ಯುಕ್ರೇನ್‌ನಲ್ಲಿ ನರಮೇಧ ನಡೆಸ್ತಾ ಇದೆ ಅಂತ ಗುಡುಗಿದ್ದಾರೆ. ಪತ್ರಕರ್ತರೊಂದಿಗೆ ಮಾತಾಡಿದ ಬೈಡನ್‌, ಹೌದು ನಾನು ಇದನ್ನ ನರಮೇಧ ಅಂತ ಕರೆದಿದ್ದೀನಿ. ಅದು ನರಮೇಧ ಹೌದಾ, ಅಲ್ವಾ ಅನ್ನೋದನ್ನ ಜಾಗತಿಕವಾಗಿ ಲಾಯರ್ಸ್‌ಗಳು ನಿರ್ಧಾರ ಮಾಡಲಿ. ಆದ್ರೆ ನನಗಂತೂ ಇದು ಅದೇ ರೀತಿ ಕಾಣುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಪುಟಿನ್‌ ಬರ್ತಾ ಬರ್ತಾ ಯುಕ್ರೇನಿಗರ ಅಸ್ತಿತ್ವವನ್ನೇ ಅಳಿಸೋ ಹಾಕೋಕೆ ನೋಡ್ತಾ ಇರೋದು ಸ್ಪಷ್ಟವಾಗ್ತಿದೆ ಎಂದಿದ್ದಾರೆ. ಇದೇ ಮೊದಲ ಬಾರಿಗೆ ದೇಶದ ಉನ್ನತ ಹುದ್ದೆಯಲ್ಲಿರೋ ವ್ಯಕ್ತಿಯೊಬ್ರು ರಷ್ಯಾದ ಕೃತ್ಯವನ್ನ ‘ನರಮೇಧʼ ಅಥವಾ ಹತ್ಯಾಕಾಂಡ ಅನ್ನೋ ಗಂಭೀರ ಪದ ಬಳಸಿ ಕರೆದಿದ್ದಾರೆ. ಇನ್ನು ಇದಕ್ಕೆ ತಕ್ಷಣವೇ ಟ್ವೀಟ್‌ ಮಾಡಿ ಪ್ರತಿಕ್ರಿಯಿಸಿರೋ ಜೆಲನ್‌ಸ್ಕಿ, ನಿಜವಾದ ನಾಯಕನ ನಿಜವಾದ ಮಾತುಗಳು ಅಂತ ಬಣ್ಣಿಸಿದ್ದಾರೆ.

-masthmagaa.com

Contact Us for Advertisement

Leave a Reply