ಪುಟಿನ್‌ಗೆ ಕ್ರಿಸ್‌ಮಸ್‌ ಗಿಫ್ಟ್‌ ಕೊಡಬೇಕು: ಜೋ ಬೈಡೆನ್‌

masthmagaa.com:

ಯುಕ್ರೇನ್‌ ಅಧ್ಯಕ್ಷ ವೊಲಾಡಿಮಿರ್‌ ಝೆಲೆನ್ಸ್ಕಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಒಟ್ಟಾಗಿ ರಷ್ಯಾಗೆ ಮೆಸೇಜ್‌ ಒಂದನ್ನ ನೀಡಿದ್ದಾರೆ. ಮಂಗಳವಾರ ವೈಟ್‌ ಹೌಸ್‌ಗೆ ಭೇಟಿ ನೀಡಿದ್ದ ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮಾತನಾಡೋವಾಗ ರಷ್ಯಾ ಅಧ್ಯಕ್ಷ ಪುಟಿನ್‌ ಯಾವಾಗಲೂ ನೆನೆಸಿಕೊಳ್ಳೋ ತರ ದೊಡ್ಡ ಕ್ರಿಸ್‌ಮಸ್‌ ಗಿಫ್ಟ್‌ ಕೊಡ್ಬೇಕು ಅಂತ ಬೈಡೆನ್‌ ಹೇಳಿದ್ದಾರೆ. ರಷ್ಯಾ ಕ್ರಿಸ್‌ಮಸ್‌ ರಜೆಗೆ ಹೋಗೋಕೆ ಮುಂಚೆ ಅಮೆರಿಕನ್‌ ಕಾಂಗ್ರೆಸ್‌ ಯುಕ್ರೇನ್‌ಗೆ ಫಂಡ್‌ಗಳನ್ನ ನೀಡಿ ರಷ್ಯಾ ಮುಟ್ಟಿ ನೋಡುಕೊಳ್ಳುವಂತೆ ತಿರುಗೇಟು ಕೊಡುತ್ತೆ ಅಂತ ಬೈಡೆನ್‌ ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಕೂಡ 60 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 5 ಲಕ್ಷ ಕೋಟಿ ನೆರವನ್ನ ಅಮೆರಿಕ ಅಪ್ರೂವ್‌ ಮಾಡ್ಬೇಕು ಅಂತ ಕೋರಿದ್ದಾರೆ. ಅಲ್ಲದೆ ಯುದ್ಧದ ಅಂತ್ಯದಲ್ಲಿ ಒಂದಿಂಚೂ ನೆಲವನ್ನ ರಷ್ಯಾಗೆ ಬಿಟ್ಟು ಕೊಡೋದಿಲ್ಲ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply