ಅಮೆರಿಕಾದ ಮಧ್ಯಂತರ ಚುನಾವಣೆಯಲ್ಲಿ ಬೈಡನ್‌ ಪಕ್ಷಕ್ಕೆ ಮೇಲುಗೈ!

masthmagaa.com:

ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಜೋ ಬೈಡನ್‌ ನೇತೃತ್ವದ ಡೆಮೊಕ್ರೇಟಿಕ್‌ ಪಕ್ಷ ತನ್ನ ಹಿಡಿತ ಸಾಧಿಸಿದೆ. ನೆವಾಡದಲ್ಲಿನ ಪ್ರಮುಖ ರೇಸ್‌ನಲ್ಲಿ ಡೆಮೊಕ್ರೇಟಿಕ್‌ ಅಭ್ಯರ್ಥಿ ಕ್ಯಾಥರಿನ್‌ ಕಾರ್ಟೆಜ್‌ ಮಾಸ್ಟೊ ಗೆದ್ದಿದ್ದಾರೆ. ಇದ್ರೊಂದಿಗೆ ಡೆಮೊಕ್ರೇಟಿಕ್‌ಗೆ ಬೇಕಾದ 50 ಸೀಟ್‌ಗಳ ಬಹುಮತವನ್ನ ಭದ್ರಪಡಿಸಿಕೊಂಡಿದೆ. ಇನ್ನು ಈ ಅನಿರೀಕ್ಷಿತ ಯಶಸ್ಸಿನ ಕಾರಣದಿಂದ ನಾವು ಒಂದು ಬಲಿಷ್ಠ ಸ್ಥಾನದಲ್ಲಿ ಇದ್ಕೊಂಡು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜೊತೆ ಮಾತುಕತೆ ನಡೆಸ್ಬೋದು ಅಂತ ಬೈಡನ್‌ ಹೇಳಿದ್ದಾರೆ. ನನಗೆ ಜಿನ್‌ಪಿಂಗ್‌ ಬಗ್ಗೆ ಗೊತ್ತು ಹಾಗೆ ಜಿನ್‌ಪಿಂಗ್‌ಗೂ ಕೂಡ ನನ್ನ ಬಗ್ಗೆ ಸರಿಯಾಗಿ ಗೊತ್ತಿದೆ. ನಾವು ಯಾವಾಗ್ಲೂ ನೇರವಾದ ಚರ್ಚೆಗಳನ್ನ ಮಾಡಿದ್ದೇವೆ. ಜೊತೆಗೆ ನಮ್ಮಿಬ್ರ ಮಧ್ಯ ಮನಸ್ತಾಪಗಳು ತುಂಬಾ ಕಡಿಮೆ ಅಂತ ಬೈಡನ್‌ ಹೇಳಿದ್ದಾರೆ. ಅಂದ್ಹಾಗೆ ಉಭಯ ನಾಯಕರು ನಾಳೆ ಇಂಡೋನೇಷ್ಯಾದಲ್ಲಿ ನಡೆಯಲಿರೋ G20 ಶೃಂಗಸಭೆಯಲ್ಲಿ ಭೇಟಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಡನ್‌ ಜಿನ್‌ಪಿಂಗ್‌ ಬಗ್ಗೆ ಮಾತಾಡಿದ್ದಾರೆ.

-masthmagaa.com

Contact Us for Advertisement

Leave a Reply