ಚೀನಾಗೆ ಅಮೆರಿಕ ಕೌಂಟರ್! ಆಸಿಯಾನ್‌ ಜೊತೆ ʻಗ್ರೇಟ್‌ ಫ್ರೆಂಡ್ಶಿಪ್ʼ

masthmagaa.com:

ಅಮೆರಿಕದಲ್ಲಿ ನಡೆಯುತ್ತಿದ್ದ ಆಸಿಯಾನ್‌ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಹಕಾರ ಸಂಘಟನೆ) ಹಾಗೂ ಅಮೆರಿಕ ನಡುವಿನ ಎರಡು ದಿನಗಳ ಶೃಂಗಸಭೆಗೆ ತೆರೆ ಬಿದ್ದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸಿಯಾನ್‌ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಿದ್ದು ಈ ವೇಳೆ ಇಬ್ಬರ ನಡುವೆ ಹೊಸ ಯುಗ ಆರಂಭವಾಗಿದೆ ಅಂತ ಬಣ್ಣಿಸಿದ್ದಾರೆ. ಅಲ್ಲದೇ ಮುಂದಿನ 50 ವರ್ಷಗಳಲ್ಲಿ ಪ್ರಪಂಚದ ಗ್ರೇಟ್‌ ರಿಲೇಷನ್‌ಶಿಪ್‌ ಅನ್ನ ಆಸಿಯಾನ್‌ ಜೊತೆಗೆ ಅಮೆರಿಕ ಹೊಂದಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಚೀನಾವನ್ನ ಮಂಡಿಯೂರಿಸ್ಬೇಕು ಅಂತ ಅದರ ಪಕ್ಕದ ರಾಷ್ಟ್ರಗಳು, ಹಾಗೂ ಆಗ್ನೇಯ ಏಷ್ಯಾಗೆ ಕಣ್ಣು ಹಾಕಿರೋ ಅಮೆರಿಕ ನಿನ್ನೆಯಷ್ಟೇ ಆಸಿಯಾನ್‌ ಜೊತೆಗೆ ಸಾವಿರ ಕೋಟಿಗೂ ರೂಪಾಯಿಗೂ ಹೆಚ್ಚು ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು.

-masthmagaa.com

Contact Us for Advertisement

Leave a Reply