ಚೀನಾ ಜೊತೆಗೆ ನಮಗೆ ಸ್ಪರ್ಧೆ ಬೇಕೇ ಹೊರತು ಸಂಘರ್ಷವಲ್ಲ: ಅಮೆರಿಕ

masthmagaa.com:

ಚೀನಾ ಜೊತೆಗೆ ನಮಗೆ ಸ್ಪರ್ಧೆ ಬೇಕೇ ಹೊರತು ಸಂಘರ್ಷವಲ್ಲ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದಾರೆ. ಇಂಡೋನೇಷ್ಯಾದಲ್ಲಿ ನಡೆಯಲಿರೋ G20 ಶೃಂಗಸಭೆಗೆ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್‌ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾಗಿಯಾಗ್ತಿದ್ದಾರೆ. ಈ ವೇಳೆ ಉಭಯ ನಾಯಕರು ಮಾತುಕತೆ ನಡೆಸೋ ಸಾಧ್ಯತೆ ಇದೆ. ತೈವಾನ್‌ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಇಬ್ಬರಿಗೂ ದೊಡ್ಡ ಕಂದಕ ನಿರ್ಮಾಣವಾಗಿರೋ ಹೊತ್ತಲ್ಲೇ ಇದೀಗ ಅಮೆರಿಕ ಅಧ್ಯಕ್ಷರ ಈ ಮಾತು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ‌ನಾನು ಚೀನಾದ ಅಧ್ಯಕ್ಷರ ಜೊತೆಗೆ ಹಲವು ಬಾರಿ ಮಾತನಾಡಿದ್ದೀನಿ.ಅವಾಗೆಲ್ಲಾ ನಾನು ಇದನ್ನೇ ಹೇಳ್ತಾ ಇದ್ದೀನಿ. ಚೀನಾ ಜೊತೆಗೆ ನಮಗೆ ಸ್ಪರ್ಧೆ ಬೇಕೇ ಹೊರತು ಸಂಘರ್ಷವಲ್ಲ ಅಂತ. ನಮ್ಮಲ್ಲಿರೋ ಕೆಲವು ಭಿನ್ನಾಭಿಪ್ರಾಯಗಳಿಗೆ ಏನು ಕಾರಣ…ಹಾಗೂ ಅವು ಉಭಯ ದೇಶಗಳ ಹಿತಾಶಕ್ತಿಗಳಿಗೆ ಯಾವ ರೀತಿ ಪರಿಣಾಮ ಬೀರುತ್ತೆ ಅದನ್ನ ಅರ್ಥಮಾಡಿಕೊಳ್ಳಬೇಕು ಅಂತ ನಾನು ಹೇಳಿದ್ದೀನಿ ಅಂತ ಬೈಡೆನ್‌ ಹೇಳಿದಾರೆ.

-masthmagaa.com

Contact Us for Advertisement

Leave a Reply