$6.7 ಟ್ರಿಲಿಯನ್ ಬಜೆಟ್‌ ಮಂಡಿಸಿದ ಬೈಡೆನ್! ಭಾರತಕ್ಕಿಂತ ಎಷ್ಟು ಪಟ್ಟು ಹೆಚ್ಚು ಗೊತ್ತಾ?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 2023-24ನೇ ಸಾಲಿನ ವಾರ್ಷಿಕ ಬಜೆಟ್‌ನ್ನ ಮಂಡಿಸಿದ್ದಾರೆ. 6.9 ಟ್ರಿಲಿಯನ್‌ ಡಾಲರ್ ಅಂದ್ರೆ ಬರೋಬ್ಬರಿ 565 ಲಕ್ಷ ಕೋಟಿ ರೂಪಾಯಿ ಬಜೆಟ್‌ನ್ನ ಮಂಡಿಸಿದ್ದಾರೆ. ಇದು ಭಾರತ ಮಂಡಿಸಿರೋ 45 ಲಕ್ಷ ಕೋಟಿ ರೂ. ಬಜೆಟ್‌ಗಿಂತ ಸುಮಾರು 12 ಪಟ್ಟು ಹೆಚ್ಚು. ಈ ಬಜೆಟ್‌ನಲ್ಲಿ ಬೈಡೆನ್‌ ಸರ್ಕಾರಿ ಯೋಜನೆಗಳಿಗೆ ಹೆಚ್ಚಿನ ಹಣವನ್ನ ಹಂಚಿದ್ದಾರೆ. ಜೊತೆಗೆ ಔಷಧಿಗಳ ದರ ಕಡಿಮೆ ಮಾಡೋ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದ ಬಜೆಟ್‌ನ್ನ ಕೂಡ ಹೆಚ್ಚಿಸಿದ್ದಾರೆ ಎನ್ನಲಾಗಿದೆ. ಇನ್ನು ಬೈಡೆನ್‌ರ ಬಜೆಟ್‌ನ ಇತರ ಪ್ರಮುಖ ಅಂಶಗಳನ್ನ ನೋಡೋದಾದ್ರೆ, ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ, ಸಾಮಾಜಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ, ಪ್ರಮುಖ ಮೂಲಸೌಕರ್ಯಗಳ ನಿರ್ಮಾಣ ಹಾಗೂ ಚೈಲ್ಡ್‌ಕೇರ್‌ ಫೆಸಿಲಿಟಿಗಳಿಗೆ ಈ ಬಜೆಟ್‌ನಲ್ಲಿ ಅಧಿಕ ಒತ್ತು ನೀಡಲಾಗಿದೆ. ಇದೇ ವೇಳೆ ಅಮೆರಿಕದ 1.7 ಟ್ರಿಲಿಯನ್‌ ಡಾಲರ್‌ ಡೆಫಿಸಿಟ್‌ ಅಂದ್ರೆ ಆದಾಯ ಕೊರತೆ ಕಡಿಮೆಯಾಗಿದ್ದು, ಇತಿಹಾಸದಲ್ಲೇ ಹೆಚ್ಚಿನ ಆದಾಯ ಕೊರತೆಯನ್ನ ಬೈಡೆನ್‌ ಆಡಳಿತ ಕಡಿಮೆ ಮಾಡಿದೆ ಅಂತ ಹೇಳಲಾಗಿದೆ. ಹಾಗೂ ಈಗ ಮಂಡಿಸಿರೊ ಬಜೆಟ್‌ ಮುಂದಿನ 10 ವರ್ಷಗಳಲ್ಲಿ ಅಮೆರಿಕದ ಡೆಫಿಸಿಟ್‌ನ್ನ 3 ಟ್ರಿಲಿಯನ್‌ ಡಾಲರ್‌ನಷ್ಟು ಕಡಿಮೆ ಮಾಡುತ್ತೆ ಅಂತ ಬೈಡೆನ್‌ ಹೇಳಿದ್ದಾರೆ. ಇನ್ನು ರಕ್ಷಣಾ ವಲಯಕ್ಕೆ 842 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 69 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ನಮ್ಮ ದೇಶದ ಟೋಟಲ್‌ ಬಜೆಟ್‌ಗಿಂತ ಒಂದೂವರೆ ಪಟ್ಟು ಹೆಚ್ಚಿನ ಹಣವನ್ನ ರಕ್ಷಣಾ ವಲಯ ಒಂದಕ್ಕೆ ಮೀಸಲಿಡಲಾಗಿದೆ.

-masthmagaa.com

 

Contact Us for Advertisement

Leave a Reply