ಸಿರಿಯಾ ದಾಳಿಗೆ ತಕ್ಕ ಉತ್ತರ ಕೊಟ್ಟ ಅಮೆರಿಕ!

masthmag-aa.com:

ಮಿಡಲ್‌ ಈಸ್ಟ್‌ ಕೆಂಡಕ್ಕೆ ಜೋರಾಗಿ ಬೆಂಕಿ ಹೊತ್ತುಕೊಳ್ಳೋ ಲಕ್ಷಣ ಕಾಣಿಸ್ತಿದೆ. ಹಮಾಸ್‌ ವಿರುದ್ದ ಇಸ್ರೇಲ್‌ ರಣಾಕ್ರೋಶದಲ್ಲಿ ಮುನ್ನುಗ್ಗುತ್ತಿದ್ರೆ ಇತ್ತ ಸಿರಿಯಾದಲ್ಲಿ ಅಮೆರಿಕ ಸೇನೆ ದಾಳಿ ನಡೆಸಿದೆ. ಪೂರ್ವ ಸಿರಿಯಾದಲ್ಲಿನ ಇರಾನ್‌ ರೆವಲುಷನ್‌ ಗಾರ್ಡ್‌ ಜೊತೆಗೆ ನಂಟು ಹೊಂದಿದ್ದ ಸಿರಿಯನ್‌ ಉಗ್ರ ನೆಲೆಗಳ ಮೇಲೆ ಅಮೆರಿಕ ಇಂದು ಬೆಳಿಗ್ಗೆ ವಾಯುದಾಳಿ ನಡೆಸಿದೆ. ಕಳೆದ ವಾರ ಸಿರಿಯಾ ಮತ್ತು ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ನಿರಂತರವಾಗಿ ಇರಾನ್‌ ಬೆಂಬಲಿತ ಉಗ್ರಗುಂಪುಗಳು ಡ್ರೋನ್‌ ಮತ್ತು ಮಿಸೈಲ್‌ ದಾಳಿ ನಡೆಸಿದ್ವು. ಹೀಗಾಗಿ ಅಮೆರಿಕ ಕೂಡ ತಿರುಗೇಟು ನೀಡಿದೆ ಅಂತ ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿದೆ. ಈ ಕುರಿತು ಅಧ್ಯಕ್ಷ ಜೋ ಬೈಡೆನ್‌ ಡೈರೆಕ್ಟ್‌ ಆಗಿ ಇರಾನ್‌ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಮೆಸೇಜ್‌ ಕಳಿಸಿದ್ದಾರೆ ಅಂತ ವೈಟ್‌ಹೌಸ್‌ ವಕ್ತಾರ ಜಾನ್‌ ಕಿರ್ಬಿ ಹೇಳಿದ್ದಾರೆ. ಇತ್ತ 1980ರ ಕೇಸ್‌ ಒಂದಕ್ಕೆ ಸಂಬಂಧಿಸಿದಂತೆ ಇರಾನ್‌ಗೆ 420 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 3,486 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕಗೆ ಇರಾನ್‌ ಕೋರ್ಟ್‌ ಆದೇಶ ನೀಡಿದೆ. 1979ರ ಇಸ್ಲಾಮಿಕ್‌ ರೆವೊಲ್ಯೂಷನ್‌ ನಂತರ ಟೆಹ್ರಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ 50 ಮಂದಿ ಅಮೆರಿಕನ್ನರನ್ನ ಇರಾನ್‌ ವಿದ್ಯಾರ್ಥಿಗಳು ಬರೋಬ್ಬರಿ 444 ದಿನಗಳ ಕಾಲ ಬಂದಿಸಿಟ್ಟಿದ್ರು. ಇವರನ್ನ ಬಿಡಿಸೋಕೆ ಅಮೆರಿಕ ಆಪರೇಶನ್‌ ʻಈಗಲ್‌ ಕ್ಲಾವ್‌ʼ ಕೈಗೊಂಡಿತ್ತು. ಆದ್ರೆ ಈ ಪ್ರಯತ್ನ ವಿಫಲವಾಗಿತ್ತು. ಈ ಕಾರ್ಯಾಚರಣೆ ಸಂದರ್ಭದಲ್ಲಿ ಇರಾನ್‌ ನಾಗರೀಕರಿದ್ದ ಬಸ್‌ ಒಂದ್ರ ಮೇಲೆ ಅಮೆರಿಕ ಅಟ್ಯಾಕ್‌ ಮಾಡಿತ್ತು. ಈಗ ಇದರ ಸಂತ್ರಸ್ತ ಕುಟುಂಬಗಳು ನೀಡಿದ ದೂರಿನ ಆಧಾರದ ಮೇಲೆ ಇರಾನ್‌ ಕೋರ್ಟ್‌ ಅಮೆರಿಕಗೆ ಪರಿಹಾರ ನೀಡುವಂತೆ ಸೂಚಿಸಿದೆ.

 

Contact Us for Advertisement

Leave a Reply