ಬಿಗ್‌ಬಾಸ್‌ 10 : ಈ ಸಲ ಬಿಗ್‌ಬಾಸ್‌ ಸಮ್‌ಥಿಂಗ್‌ ಸ್ಪೆಷಲ್‌ !

masthmagaa.com:

ಬಿಗ್‌ಬಾಸ್‌ ಸೀಸನ್‌ 10 ಬರ್ತಾ ಇದೆ ಆದ್ರೆ  ಏನೋ ಸಮ್‌ಥಿಂಗ್‌ ಸ್ಪೆಷಲ್‌ ಇದೆ. ಏನ್‌ ಸ್ಪೆಷಲ್‌ ಇದೆ ಅಂತ ನೋಡೋಣ. ಕಿರುತೆರೆ ಲೋಕದಲ್ಲೇ ಅತೀ ದೊಡ್ಡ ಶೋ ಅಂದ್ರೆ ಅದು ಬಿಗ್‌ಬಾಸ್‌. ಬಾದ್‌ಷಾ ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡುವಂತ ಈ ಬಿಗ್‌ಬಾಸ್‌ ಅನ್ನ ಸುದೀಪ್‌ ಅವರಿಗೋಸ್ಕರನೇ ನೋಡೋ ಜನರೂ ಕೂಡ ಇದ್ದಾರೆ.ಇದೀಗ ಮತ್ತೆ ಟಿವಿ ಪರದೆ ಮೇಲೆ ಬಿಗ್‌ಬಾಸ್‌ ನೋಡೋಕೆ ಕೌಂಟ್‌ಡೌನ್‌ ಶುರುವಾಗಿದೆ. ಬಿಗ್‌ಬಾಸ್‌ ಸೀಸನ್‌ 10 ಮೊದಲ ಪ್ರೋಮೋ ಕೂಡ ರಿಲೀಸ್‌ ಆಗಿದೆ.

ಈ ಪ್ರೋಮೋದಲ್ಲಿ ಇರೋ ಪ್ರಕಾರ ಈ ಬಾರಿ ಬಿಗ್‌ಬಾಸ್‌ ಸೀಸನ್‌ 10 ಸ್ಪಲ್ಪ ಡಿಫರೆಂಟ್‌ ಆಗಿ ಮೂಡಿಬರಲಿದೆ ಅನ್ನೋ ಸುಳಿವು ಸಿಗತ್ತೆ. ಸಾಮಾನ್ಯವಾಗಿ ಬಿಗ್‌ಬಾಸ್‌ ಇದು ಮನೆಯ ಒಳಗೆ ನಡೆಯೋ ಗೇಮ್‌. ಆದ್ರೆ ಈ ಬಾರಿ ಪ್ರೋಮೋದಲ್ಲಿ ಸ್ವಲ್ಪ ಚೇಂಜ್‌ ಇದೆ. ಮನೆಯೊಳಗಿನ ಕ್ಯಾಮರಾದ ಬದಲು ರೋಡ್‌ ಮೇಲೆ, ಕಟ್ಟಡಗಳ ಮೇಲೆ ಇರುವಂತ ಕ್ಯಾಮರಾ, ರೋಡ್‌ ಮೇಲೆ ಒಡಾಡುವಂತ ಜನರ ದೃಶ್ಯಗಳನ್ನ ಈ ಪ್ರೋಮೋದಲ್ಲಿ ತೋರಿಸಿದ್ದಾರೆ. ಪ್ರೋಮೋದ ಕೊನೆಯಲ್ಲಿ ಬಿಗ್‌ಬಾಸ್‌ ಸಮ್‌ಥಿಂಗ್‌ ಸ್ಪೆಷಲ್‌ ಅಂತ ಕೂಡ ಹೇಳಿದ್ದಾರೆ. ಇದೆಲ್ಲ ನೋಡಿದ ಪ್ರೇಕ್ಷಕರ ಕುತೂಹಲ ಇನ್ನೂ ಕೂಡ ಹೆಚ್ಚಾಗಿದೆ. ಬಿಗ್‌ಬಾಸ್‌ಗೆ ಯಾರೆಲ್ಲಾ ಬರಲಿದ್ದಾರೆ ಅನ್ನೋ ಕುತೂಹಲ ಒಂದ್ಕಡೆ ಆದ್ರೆ ಈ ಸಲ ಬಿಗ್‌ಬಾಸ್‌ ಸಮ್‌ಥಿಂಗ್‌ ಸ್ಪೆಷಲ್‌ ಅನ್ನೋ ಕುತೂಹಲ ಇನ್ನೊಂದು ಕಡೆ ಆಗಿದೆ. ಮುಂದಿನ ಅಪ್‌ಡೇಟ್‌ ಬರೋ ತನಕ ಕಾಯಲೇಬೇಕಾಗಿದೆ.

-masthmagaa.com

Contact Us for Advertisement

Leave a Reply