ಬಿಹಾರ್‌ ಹೊಸ ಜಾತಿ ಸಮೀಕ್ಷೆ ಡೇಟಾ ರಿಲೀಸ್‌: 33% ಜನರ ಆದಾಯ ಕೇವಲ 6,000!

masthmagaa.com:

ಬಿಹಾರ್‌ನ ಹಿಂದುಳಿದ ವರ್ಗಗಳ ಮತ್ತು ತೀವ್ರ ಹಿಂದುಳಿದ ವರ್ಗಗಳ ಸುಮಾರು 33% ಜನರು ಬಡವರು ಮತ್ತು 6,000 ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನ ಗಳಿಸ್ತಿದ್ದಾರೆ. ಹೀಗಂತ ಬಿಹಾರ್‌ನ ಹೊಸ ಜಾತಿ ಸಮೀಕ್ಷೆ ಡೇಟಾ ವರದಿ ಮಾಡಿದೆ. ಈ ಡೇಟಾ ಪ್ರಕಾರ, ಪರಿಶಿಷ್ಟ ಜಾತಿಯಲ್ಲಿ 42.92% ಮತ್ತು ಪರಿಶಿಷ್ಟ ಪಂಗಡದಲ್ಲಿ 42.7% ಜನರು ರಾಜ್ಯದ ಕಡು ಬಡವರ ವರ್ಗಕ್ಕೆ ಸೇರ್ತಾರೆ. ಆದ್ರೆ ರಾಜ್ಯದ ಜನರಲ್‌ ಕ್ಯಾಟಗರಿಗೆ ಸೇರಿರೋರಲ್ಲಿ ಬಡವರ ಅಂಶ ತುಂಬ ಕಡಿಮೆ ಇದೆ ಅಂದ್ರೆ 25.09% ರಷ್ಟಿದೆ ಅಂತ ತಿಳಿಸಿದ್ದಾರೆ. ಇನ್ನು 50 ಲಕ್ಷಕ್ಕೂ ಹೆಚ್ಚು ಜನರು ಹೊಟ್ಟೆಪಾಡು ಮತ್ತು ಉತ್ತಮ ವಿದ್ಯಾಭ್ಯಾಸಕ್ಕಾಗಿ ಬೇರೆ ರಾಜ್ಯಗಳಲ್ಲಿ ವಾಸಿಸ್ತಾ ಇದ್ದಾರೆ ಅಂತ ವರದಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply