ವ್ಯಭಿಚಾರ ಕೇಸ್‌ನಲ್ಲಿ ಟ್ರಂಪ್‌ ಹಾಗೂ ಬಿಲ್‌ ಕ್ಲಿಂಟನ್‌ ಹೆಸರು!

masthmagaa.com:

ಮಹತ್ವದ ಬೆಳವಣಿಗೆವೊಂದ್ರಲ್ಲಿ ಅಮೆರಿಕ ಮಾಜಿ ಅಧ್ಯಕ್ಷರಾದ ಬಿಲ್‌ ಕ್ಲಿಂಟನ್‌ ಹಾಗೂ ಡೊನಾಲ್ಡ್‌ ಟ್ರಂಪ್‌ ಹೆಸರುಗಳು ವ್ಯಭಿಚಾರ್‌ ಕೇಸ್‌ ಒಂದ್ರಲ್ಲಿ ಕೇಳಿ ಬಂದಿವೆ. ಅಮೆರಿಕದ ಮಲ್ಟಿ ಮಿಲಿನೆಯರ್‌ ಲೇಟ್‌ ಜೆಫ್ರಿ ಎಪ್ಸ್‌ಟನ್‌ ವ್ಯಭಿಚಾರ ಕೇಸ್‌ನಲ್ಲಿ ಈ ಹೆಸರುಗಳು ಕೇಳಿ ಬಂದಿವೆ. ಮಹಿಳೆಯೊಬ್ರು ಎಪ್ಸ್‌ಟನ್‌ ಅವ್ರ ಮಸಾಜ್‌ ಪಾರ್ಲರ್‌ನಲ್ಲಿ ನನ್ನನ್ನ ರೆಕ್ರೂಟ್‌ ಮಾಡ್ಕೊಂಡಿದ್ರು. ಈ ವೇಳೆ ಬಲವಂತವಾಗಿ ನನ್ನನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯ ಮಾಡಿದ್ರು. ಹಲವು ಬಾರಿ ಎಪ್ಸ್‌ಟನ್‌ ಕ್ಲಿಂಟನ್‌ ಬಗ್ಗೆ ಮಾತನಾಡಿದ್ರು. ಅದ್ರಲ್ಲೂ ಮಹಿಳೆಯರಿಗೆ ಅನ್ವಯ ಆಗೋ ಒಮ್ಮೆ “Clinton likes them young,” ಅಂತ ಎಪ್ಸ್‌ಟನ್‌ ಹೇಳಿದ್ರು. ಒಂದೆರಡು ಬಾರಿ ಕ್ಲಿಂಟನ್‌ ಹಾಗೂ ಎಪ್ಸ್ಟನ್‌ ಒಟ್ಟಿಗೆ ಪ್ರೈವೇಟ್‌ ಜೆಟ್‌ನಲ್ಲಿ ಒಡಾಡಿದ್ರು ಅಂತ ಮಹಿಳೆ ಹೇಳಿದ್ದಾರೆ. ಅಲ್ಲದೆ ಎಪ್ಸ್‌ಟನ್‌ ಒಮ್ಮೆ ಟ್ರಂಪ್‌ರನ್ನ ಕೆಸಿನೋ ಒಂದಕ್ಕೆ ಇನ್ವೈಟ್‌ ಮಾಡೋ ಬಗ್ಗೆ ಮಾತನಾಡಿದ್ರು ಅಂದ್ದಾರೆ. ಅದು ಬಿಟ್ರೆ ಬೇರೆ ಆರೋಪಗಳು ಟ್ರಂಪ್‌ ಮೇಲೆ ಇಲ್ಲ. ಅಂದ್ಹಾಗೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನ ವ್ಯಭಿಚಾರಕ್ಕೆ ನೂಕಿದ ಆರೋಪದ ಮೇಲೆ ಜೆಫ್ರಿ ಎಪ್ಸ್ಟ್‌ಟನ್‌ನನ್ನ 2019ರಲ್ಲಿ ಬಂಧಿಸಲಾಗಿತ್ತು. ಅದೇ ವರ್ಷ ಆತ ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದ. ಇದೀಗ ಈ ಕೇಸಿನ ಡಾಕ್ಯುಮೆಂಟ್‌ಗಳಲ್ಲಿ ಕ್ಲಿಂಟನ್‌, ಟ್ರಂಪ್‌ ಹೆಸರುಗಳು ತಳುಕು ಹಾಕೊಂಡಿವೆ. ಅಲ್ಲದೆ ಬ್ರಿಟನ್‌ ಮಾಜಿ ಪ್ರಿನ್ಸ್‌ ಆಂಡ್ರೆವ್‌ ಹಾಗೂ ಪಾಪ್‌ ಸಿಂಗರ್‌ ಮೈಕಲ್‌ ಜಾಕ್ಸನ್‌ ಹೆಸರೂ ಕೂಡ ಈ ಡಾಕ್ಯುಮೆಂಟ್‌ಗಳಲ್ಲಿ ಇರೋ ವಿಚಾರ ಬಯಲಾಗಿದೆ.

-masthmagaa.com

Contact Us for Advertisement

Leave a Reply