ಮತ್ತೆ ಪ್ರೀತಿಗೆ ಬಿದ್ದ 67ವರ್ಷದ ಕುಬೇರ ಬಿಲ್‌ ಗೇಟ್ಸ್‌! ಡೇಟಿಂಗ್‌ ಮಾಡ್ತಿರೋ ಹುಡುಗಿ ಯಾರು ಗೊತ್ತಾ?

masthmagaa.com:

ಜಗತ್ತಿನ ಶ್ರೀಮಂತ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಒರಾಕಲ್‌ ಮಾಜಿ ಸಿಇಒ ಮಾರ್ಕ್‌ ಹರ್ಡ್‌ ಪತ್ನಿ ಪೌಲಾ ಹರ್ಡ್‌ ಜೊತೆಗೆ ಡೇಟಿಂಗ್ ಮಾಡ್ತಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿವೆ. 60 ವರ್ಷದ ಪೌಲಾ ಹರ್ಡ್ ವರ ಪತಿ ಮಾರ್ಕ್‌ ಹರ್ಡ್‌ 2019ರಲ್ಲಿ ನಿಧನರಾಗಿದ್ರು. ಬಿಲ್ ಗೇಟ್ಸ್ 2021ರಲ್ಲಿ ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್ಗೆ ಡಿವೋರ್ಸ್‌ ಕೊಟ್ಟಿದ್ರು. ಹೀಗಾಗಿ ಈ ಇಬ್ರ ನಡುವೆ ಪ್ರೇಮಾಂಕುರ ಆಗಿದೆ ಅಂತ ವರದಿಯಾಗಿದೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್​ನ ಪುರುಷರ ಸಿಂಗಲ್ಸ್ ಪಂದ್ಯಾವಳಿ ಸಮಯದಲ್ಲಿ ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್‌ ಜೊತೆಯಾಗಿ ಕಾಣಿಸಿಕೊಂಡಿದ್ದರು. ಪ್ರೇಮಿಗಳ ದಿನ ಹತ್ತಿರ ಬರ್ತಿದ್ದಂತೆ ಈ ವಿಚಾರ ಓಡಾಡ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply