ಲೋಕಸಭೆಯಲ್ಲಿ ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ: ಪ್ರತಿಪಕ್ಷಗಳಿಂದ ವಿರೋಧ

masthmagaa.com:

ವಿದ್ಯುತ್ ಸರಬರಾಜುದಾರರಿಗೆ ಯಾವುದೇ ತಾರತಮ್ಯವಿಲ್ದೇ ವಿತರಣಾ ನೆಟವರ್ಕ್‌ಗಳಿಗೆ ಮುಕ್ತ ಪ್ರವೇಶ ಅನುಮತಿಸೊ ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆಯನ್ನ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಆದ್ರೆ ಈ ಮಸೂದೆ ರಾಜ್ಯ ಸರ್ಕಾರಗಳ ಕೆಲವು ನಿರ್ದಿಷ್ಟ ಹಕ್ಕಗಳನ್ನ ಕಸಿದುಕೊಳ್ಳುತ್ತೆ ಅಂತ ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿವೆ. ಹಾಗೂ ವಿದ್ಯುತ್‌, ಕಾನ್‌ಕರೆಂಟ್‌ ಲಿಸ್ಟ್‌ ಅಂದ್ರೆ ಸಮವರ್ತಿ ಪಟ್ಟಿಯಲ್ಲಿ ಬರುತ್ತೆ. ಮಸೂದೆಯನ್ನ ಮಂಡಿಸೋ ಮೊದಲು ರಾಜ್ಯ ಸರ್ಕಾರಗಳ ಜೊತೆ ಚರ್ಚೆ ಮಾಡೋದು ಕೇಂದ್ರದ ಕರ್ತವ್ಯ ಅಂತ ಪ್ರತಿಪಕ್ಷಗಳು ಆಗ್ರಹ ಮಾಡಿವೆ.

-masthmagaa.com

Contact Us for Advertisement

Leave a Reply