ಬಿಜೆಪಿ ಮುಖ್ಯಸ್ಥರ ಪತ್ನಿಯ ಕಾರ್‌ ಕಳುವು: ಪೋಲಿಸರಿಂದ ಹುಡುಕಾಟ!

masthmagaa.com:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವ್ರ ಪತ್ನಿಯ ಕಾರು ಹಾಡುಹಗಲೇ ಕ‍‍ಳ್ಳತನವಾಗಿರೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್‌ 19ರಂದು ದಿಲ್ಲಿಯ ಗೋವಿಂದ್‌ಪುರದಲ್ಲಿ ನಡ್ಡಾ ಪತ್ನಿಗೆ ಸೇರಿದ ಟಯೋಟಾ ಫಾರ್ಚೂನರ್‌ ಕಾರನ್ನ ಮಧ್ಯಾಹ್ನದ ವೇಳೆ ನಿವಾಸದ ಬಳಿ ನಿಲ್ಸಿ ಅವ್ರ ಚಾಲಕ ಊಟಕ್ಕೆ ಹೋಗಿದ್ದ. ಆದ್ರೆ ಚಾಲಕ ಊಟ ಮಾಡಿ ಬರೋವಷ್ಟರಲ್ಲಿ ಈ ಕಾರ್ ಕಳ್ಳತನವಾಗಿದೆ. ಈ ವಿಚಾರವಾಗಿ ಪೋಲಿಸರು ಹುಡುಕಾಟ ನಡೆಸ್ತಿದ್ದು, ಕಾರ್‌ ಬಗ್ಗೆ ಇಲ್ಲಿವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply