ಬ್ರಿಜ್‌ ಭೂಷಣ್‌ಗೆ ಕೊಕ್‌ ಆದ್ರೆ ಅವ್ರ ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ!

masthmagaa.com:

ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸ್ತಿರೊ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ಗೆ ಬಿಜೆಪಿ ಈ ಬಾರಿ ಲೋಕಸಭೆ ಟಿಕೆಟ್‌ ನಿರಾಕರಿಸಿದೆ. ಬದಲಾಗಿ ಅವ್ರ ಮಗ ಕರಣ್ ಭೂಷಣ್ ಸಿಂಗ್‌ಗೆ ಟಿಕೆಟ್‌ನೀಡಿದೆ. ಅಂದ್ಹಾಗೆ ಬ್ರಿಜ್‌ ಭೂಷಣ್‌ ಉತ್ತರಪ್ರದೇಶದ ಕೈಸರ್‌ಗಂಜ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ರು. ಆದ್ರೆ ಕುಸ್ತಿಪಟುಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಅಂತೇಳಿ ಇವರ ಮೇಲೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಟಿಕೆಟ್‌ ನಿರಾಕರಣೆ ಮಾಡಲಾಗಿದೆ ಅಂತೇಳಾಗ್ತಿದೆ.

-masthmagaa.com

Contact Us for Advertisement

Leave a Reply