ಕಾವೇರಿದ ಬಂಗಾಳ! ಕಲ್ಲು ತೂರಾಟ, ಪೊಲೀಸ್‌ ಬಿಜೆಪಿಗರ ಮಧ್ಯೆ ಭಾರಿ ವಾಗ್ವಾದ!

masthmagaa.com:

ಪಶ್ಚಿಮ ಬಂಗಾಳದ ಕೊಲ್ಕೊತ್ತಾ ಇಂದು ಕೋಲಾಹಲಕ್ಕೆ ಸಾಕ್ಷಿಯಾಗಿದೆ. TMC ಸರ್ಕಾರ ಭ್ರಷ್ಟಾಚಾರ ಸರ್ಕಾರ ಅಂತ ಆರೋಪಿಸಿ ಇಂದು ಬಿಜೆಪಿ ಕೊಲ್ಕಾತ್ತಾದಲ್ಲಿ ʻನಬನ್ನಾ ಚಲೋʼ ಅಂದ್ರೆ ಅಲ್ಲಿನ ಸೆಕ್ರಟ್ರಿಯೇಟ್‌ ಕಾರ್ಯಾಲಯಕ್ಕೆ ಬಿಜೆಪಿ ಪಾಳಯ ಮುತ್ತಿಗೆ ಹಾಕಲು ಮುಂದಾಗಿತ್ತು. ಈ ಪ್ರತಿಭಟನೆ ವೇಳೆ ಬಿಜೆಪಿ ಹಾಗೂ ಪೊಲೀಸ್‌ ಪಡೆಗಳ ನಡುವೆ ಭಾರಿ ವಾಗ್ವಾದ ನಡೆದಿದ್ದು ಕಲ್ಲು ತೂರಾಟವೂ ಆಗಿದೆ. ಹೌರಾ ಸೇತುವೆ ಬಳಿ ಬಿಜೆಪಿ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಘರ್ಷಣೆ ನಡೆದಿದೆ. ಅವರನ್ನು ನಿಯಂತ್ರಸೋಕೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದ್ದಾರೆ. ಈ ಘರ್ಷಣೆ ಬಳಿಕ ಮಹಿಳೆಯರನ್ನು ಒಳಗೊಂಡಂತೆ ಬಿಜೆಪಿಯ ಅನೇಕ ಕಾರ್ಯಕರ್ತರನ್ನು ಬಂಧಿಸಲಾಗಿದೆ. ರಾಣಿಗಂಜ್‌ನಲ್ಲಿ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಇತ್ತʻಶಾಂತಿಯುತವಾಗಿ ಮಾಡ್ತಿದ್ದ ಪ್ರತಿಭಟನೆಗೆ ಪೊಲೀಸರು ಅಡ್ಡಿ ಮಾಡಿದ್ರು. ಪೊಲೀಸರೂ ಕೂಡ ಕಲ್ಲು ತೂರಿದ್ದಾರೆ. ಅವರೇ ಪರಿಸ್ಥಿತಿಯನ್ನ ಉದ್ವಿಗ್ನಗೊಳಿಸಿದ್ದಾರೆ ಅಂತ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಅಲ್ದೇ ಪಶ್ಚಿಮ ಬಂಗಾಳದ ಪೊಲೀಸರು ನಮ್ಮನ್ನ ಟೆರರಿಸ್ಟ್‌ ರೀತಿ ನೋಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ಪ್ರತಿಭಟನೆ ವೇಳೆ ಅಲ್ಲಿನ ವಿಪಕ್ಷ ನಾಯಕ ಸುವೇಂದು ಅಧಿಕಾರಿ, BJP ಘಟಕದ ಮುಖ್ಯಸ್ಥ ಸುಕಾಂತ ಮಜುಮ್ದಾರ್‌ ಸೇರಿದಂತೆ ಹಲವರನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಇದ್ರ ವಿರುದ್ದ ಕಿಡಿಕಾರಿರೋ ಸುವೇಂಧು ಅಧಿಕಾರಿ ಮುಖ್ಯಮಂತ್ರಿ ಮಮತಾಗೆ ಜನರ ಬೆಂಬಲ ಇಲ್ಲ. ಅವರು ಬಂಗಾಳದಲ್ಲಿ ಉತ್ತರ ಕೊರಿಯಾದಂತೆಯೇ ಸರ್ವಾಧಿಕಾರ ಜಾರಿಗೊಳಿಸುತ್ತಿದ್ದಾರೆ. ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿರುವ ಈ ಪೊಲೀಸರು ಬೆಲೆ ತೆರಬೇಕಾಗುತ್ತದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುಲಿದೆ ಅಂತ ಹೇಳಿದ್ರು,  ಇನ್ನು ಘರ್ಷಣೆ ವೇಳೆ ಪೊಲೀಸ್‌ ವಾಹನಗಳಿಗೂ ಬೆಂಕಿ ಹಚ್ಚಲಾಗಿತ್ತು. ಆದ್ರೆ ಇದನ್ನ ಮಾಡಿದ್ದು ನಾವಲ್ಲ. TMC ಯವರು ಅಂತ ಬಿಜೆಪಿ ಆರೋಪಿಸಿದೆ.

-masthmagaa.com

Contact Us for Advertisement

Leave a Reply