BJD ಜೊತೆ ಮೈತಿ ಇಲ್ಲ: ಓರಿಸ್ಸಾದ ಡಬಲ್‌ ಎಲಕ್ಷನ್‌ಗೆ BJP ಏಕಾಂಗಿ ಸ್ಪರ್ಧೆ!

masthmagaa.com:

ಇನ್ನು ಈ ಬಾರಿ ಲೋಕಸಭೆ ಜೊತೆ ವಿಧಾನಸಭೆ ಚುನಾವಣೆ ನಡೆಯಲಿರೊ ಒಡಿಶಾದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಹೀಗಂತ ಅಲ್ಲಿನ ಬಿಜೆಪಿ ಘಟಕದ ಮುಖ್ಯಸ್ಥ ಮನಮೋಹನ ಸಮಲ್‌ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಒಡಿಶಾದಲ್ಲಿ ಆಡಳಿತರೂಢ ಬಿಜೆಡಿ ಹಾಗೂ ಬಿಜೆಪಿ ಮೈತ್ರಿ ಮಾಡ್ಕೊಳ್ಳಲ್ಲ ಅಂತ ಖಾತ್ರಿಯಾಗಿದೆ. ಅಲ್ಧೇ ಪ್ರಧಾನಿ ಮೋದಿ ಅವ್ರ ಹಲವು ಅಭಿವೃದ್ದಿ ಯೋಜನೆಗಳು ಒಡಿಶಾಗೆ ರೀಚ್‌ ಆಗ್ತಿಲ್ಲ ಅಂತೇಳಿದ ಸಮಲ್‌, ಬಿಜೆಡಿ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಅಂದ್ಹಾಗೆ ಒಡಿಶಾದಲ್ಲಿ ಒಟ್ಟು 21 ಲೋಕಸಭಾ ಕ್ಷೇತ್ರಗಳು ಮತ್ತು 147 ವಿಧಾನಸಭಾ ಕ್ಷೇತ್ರಗಳಿವೆ. ಈ ಎರಡು ಚುನಾವಣೆಗಳಿಗೆ ಮೇ 13ರಿಂದ ನಾಲ್ಕು ಹಂತದಲ್ಲಿ ವೋಟಿಂಗ್‌ ನಡೆಯಲಿದೆ.

-masthmagaa.com

Contact Us for Advertisement

Leave a Reply