ಎಲೆಕ್ಷನ್‌ಗೂ ಮುನ್ನವೇ ಸೂರತ್‌ನಲ್ಲಿ ಗೆಲುವಿನ ಖಾತೆ ತೆರೆದ ಬಿಜೆಪಿ!

masthmagaa.com:

ದೇಶದಲ್ಲಿ ಲೋಕಸಭೆ ಚುನಾವಣೆ ಸದ್ಯ ಮತದಾನ ಶುರುವಾಗಿದ್ರೆ ಅತ್ತ ಗುಜರಾತ್‌ನ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಬಿಟ್ಟಿದೆ. ಬಿಜೆಪಿ ಅಭ್ಯರ್ಥಿ ಮುಖೇಶ್‌ ದಲಾಲ್‌ ಗೆಲವು ಸಾಧಿಸಿದ್ದಾರೆ. ಆಶ್ಚರ್ಯ ಪಡಬೇಡಿ. ಅಲ್ಲೇನಾಗಿತ್ತು ಹೇಳ್ತೀವಿ. ಸೂರತ್‌ನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸೇರಿ ಹಲವು ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ರು. ಆದರೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ನೀಲೇಶ್ ಕುಂಭಾಣಿ ನಾಮಿನೇಷನ್‌ ರಿಜೆಕ್ಟ್‌ ಆಗಿತ್ತು. ಅವರು ಸಲ್ಲಿಸಿದ್ದ ಮೂರು ನಾಮಪತ್ರಗಳ ಸಹಿಯಲ್ಲಿ ವ್ಯತ್ಯಾಸ ಆಗಿತ್ತು. ಹೀಗಾಗಿ ಅವ್ರ ನಾಮಿನೇಶನ್‌ ರಿಜೆಕ್ಟ್‌ ಆಗಿದೆ ಅಂತ ಚುನಾವಣಾ ಆಯೋಗ ತಿಳಿಸಿತ್ತು. ಅಲ್ದೇ ನಿಲೇಶ್‌ ಅವರ ಬದಲಿ ಅಭ್ಯರ್ಥಿಯ ನಾಮಪತ್ರ ಕೂಡ ಇದೇ ಕಾರಣಕ್ಕೆ ರಿಜೆಕ್ಟ್‌ ಆಗಿತ್ತು. ಇನ್ನು ಕಾಂಗ್ರೆಸ್‌ ಅಭ್ಯರ್ಥಿಯ ನಾಮಿನೇಷನ್ ರಿಜೆಕ್ಟ್‌ ಆದ್ಮೇಲೆ ಕಣದಲ್ಲಿದ್ದ ಏಳು ಅಭ್ಯರ್ಥಿಗಳು ಕೂಡ ಸಡನ್‌ ಆಗಿ ನಾಮಪತ್ರವನ್ನ ವಾಪಾಸ್‌ ಪಡ್ಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಪಟ್ಟಿಯಲ್ಲಿ ಬಹುಜನ ಸಮಾಜ ಪಾರ್ಟಿಯ ಕ್ಯಾಂಡಿಡೇಟ್‌ ಕೂಡ ಇದ್ರು. ಸೋ ಸ್ಪರ್ಧೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಫಲಿತಾಂಶಕ್ಕೂ ಮುನ್ನವೇ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಮುಖೇಶ್‌ ದಲಾಲ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಇದಕ್ಕೆ ಗುಜರಾತ್‌ ಸಿಎಂ ಹೃದಯ ತುಂಬಿದ ಧನ್ಯವಾದ ಅಂತೇಳಿದ್ರೆ ಆ ಕಡೆ ಕಾಂಗ್ರೆಸ್‌ ಇದು ಮ್ಯಾಚ್‌ಫಿಕ್ಸಿಂಗ್‌ ಅಂತ ಆರೋಪ ಮಾಡಿದೆ.

-masthmagaa.com

Contact Us for Advertisement

Leave a Reply