ಉದಯಪುರ-ಅಹಮದಾಬಾದ್‌ ರೈಲು ಹಳಿ ಸ್ಫೋಟ ಪ್ರಕರಣ! ಅಧಿಕಾರಿಗಳು ಹೇಳಿದ್ದಿಷ್ಟು!

masthmagaa.com:

ಉದಯಪುರ-ಅಹಮದಾಬಾದ್‌ ರೈಲು ಹಳಿ ಸ್ಫೋಟ ಪ್ರಕರಣದಲ್ಲಿ ಉಗ್ರರ ಕೈಚಳಕದ ಶಂಕೆ ವ್ಯಕ್ತವಾದ ಹಿನ್ನೆಲೆ, NIA ವಿಚಾರಣೆ ನಡೆಸ್ತಿದೆ. ಪ್ರಾಥಮಿಕ ತನಿಖೆಯಲ್ಲಿ, ಹಳಿಗಳ ನಡುವೆ ಮೈನಿಂಗ್‌ ನಡೆಸೋಕೆ ಉಪಯೋಗಿಸುವ ಶಕ್ತಿಯುತ ಸ್ಫೋಟಕ ಬಳಸಲಾಗಿದೆ. ಸೋಲಾರ್‌ ಇಂಡಸ್ಟ್ರೀಸ್‌ ಕಂಪನಿಯೊಂದು ಇದನ್ನು ತಯಾರಿಸಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಕಳೆದ ಶನಿವಾರ ರಾತ್ರಿ ರೈಲು ಹೋದ ಕೆಲವೇ ಸಮಯದಲ್ಲಿ ಟ್ರಾಕ್‌ ಮೇಲೆ ಸ್ಪೋಟ ಉಂಟಾಗಿತ್ತು. ಇದ್ರಲ್ಲಿ ಉಗ್ರರ ಕೈವಾಡ ಶಂಕೆ ಇರೋದ್ರಿಂದ ರಾಷ್ಟ್ರೀಯ ತನಿಖಾದಳವೇ ಇದರ ತನಿಖೆ ಮಾಡ್ತಿದೆ.

-masthmagaa.com

Contact Us for Advertisement

Leave a Reply