ಅಮೆರಿಕ ಮತ್ತು ಚೀನಾದ ಉನ್ನತ ಅಧಿಕಾರಗಳ ಮಾತುಕತೆ! ಎಲ್ಲಿ? ಯಾಕೆ?

masthmagaa.com:

ಚೀನಾ ಹಾಗೂ ಅಮೆರಿಕ ನಡುವಿನ ಮುಸುಗಿನ ಗುದ್ದಾಟ ತೀವ್ರವಾಗ್ತಿರೋ ಹೊತ್ತಲ್ಲೇ ಎರಡೂ ದೇಶಗಳ ಉನ್ನತ ನಾಯಕರು ಮಾತುಕತೆ ನಡೆಸಲಿದ್ದಾರೆ. ಇದೇ ವಾರ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ 20 ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಅಮೆರಿಕದ ಸ್ಟೇಟ್‌ ಸೆಕ್ರಟ್ರಿ ಆಂಟನಿ ಬ್ಲಿಂಕನ್‌ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯೀ ಜೊತೆಗೆ ಸಭೆ ಮಾಡಲಿದ್ದಾರೆ ಅಂತ ಗೊತ್ತಾಗಿದೆ. ಈ ವೇಳೆ ಯುಕ್ರೇನ್‌ ವಿಚಾರದಲ್ಲಿ ರಷ್ಯಾ ಪರ ಇರೋ ಚೀನಾದ ನಿಲುವಿನ ಬಗ್ಗೆ ಮತ್ತು ನಾವು ಚೀನಾಗೆ ಮತ್ತೆ ವಾರ್ನಿಂಗ್‌ ನೀಡಲಿದ್ದೇವೆ ಅಂತ ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಈ ಸಭೆಗೆ ರಷ್ಯಾದ ವಿದೇಶಾಂಗ ಸಚಿವ ಸರ್ಜೇ ಲಾವ್ರೋ ಕೂಡ ಬರ್ತಾಯಿದ್ದು ಅವರ ಜೊತೆಗೆ ಸಭೆ ಮಾಡ್ತಿಲ್ಲ ಅಂತನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply