ಬೆಂಗಳೂರು ಏರ್‌ಪೋರ್ಟ್‌ಗೆ ಸಂಚಾರ ನಡೆಸಲಿವೆ ಎಲೆಕ್ಟ್ರಿಕ್‌ ಎಸಿ ಬಸ್‌!

masthmagaa.com:

ಬೆಂಗಳೂರಲ್ಲಿ ಸಂಚರಿಸುವ ವೋಲ್ವೊ ಬಸ್‌ಗಳಿಂದ ಬಿಎಂಟಿಸಿಗೆ ಭಾರೀ ನಷ್ಟವಾಗ್ತಿದೆ. ಈಗಾಗಲೇ ವೋಲ್ವೊ ಬಸ್‌ಗಳ ಸಂಖ್ಯೆಯನ್ನ ಕಡಿಮೆ ಮಾಡೋಕೆ ಶುರು ಮಾಡಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಏರ್ಪೋರ್ಟ್‌ಗೆ ಹೋಗ್ತಿರುವ ವೋಲ್ವೋ ಬಸ್‌ಗಳಿಗೂ ಗುಡ್ ಬಾಯ್ ಹೇಳೋಕೆ ಸಿದ್ಧತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ಬೆಂಗಳೂರು ಏರಪೋರ್ಟ್‌ಗೆ ಎಲೆಕ್ಟ್ರಿಕ್‌ ಬಸ್‌ಗಳನ್ನ ಬಿಡಲು ನಿರ್ಧರಿಸಿದೆ. ಸದ್ಯ ನಗರದಲ್ಲಿ ಸಂಚರಿಸುತ್ತಿರುವ ವೋಲ್ವೊ ಬಸ್‌ಗಳಿಂದ ನಿರೀಕ್ಷಿತ ಆದಾಯ ಬರ್ತಿಲ್ಲ. ಇದರಿಂದ ಸಂಸ್ಥೆಗೆ ಲಾಭದ ಬದಲು ದಿನದಿಂದ ದಿನಕ್ಕೆ ನಷ್ಟವಾಗ್ತಿದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಎಲೆಕ್ಟ್ರಿಕ್‌ ಎಸಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸೋದಾಗಿ ಬಿಎಂಟಿಸಿ ಹೇಳಿದೆ.

-masthmagaa.com

Contact Us for Advertisement

Leave a Reply