ಮುಂದಿನ ವಾರದಲ್ಲಿ ಲಭ್ಯವಾಗಲಿದೆ BMTCಯ ʻನಿಮ್ಮಬಸ್‌ʼ ಆ್ಯಪ್!

masthmagaa.com:

ಬಿಎಂಟಿಸಿಯ ಬಹು ನಿರೀಕ್ಷಿತ ನಿಮ್ಮಬಸ್‌ ಆ್ಯಪ್‌ನ್ನ ಮುಂದಿನ ವಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಅಂತ ಅಧಿಕಾರಿಯೊಬ್ರು ಹೇಳಿದ್ದಾರೆ. ಸದ್ಯ ಆ್ಯಪ್‌ನ ಬೀಟಾ ಪರೀಕ್ಷೆ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಆ್ಯಪ್‌ನ್ನ ಪ್ರಾರಂಭಿಸುತ್ತೇವೆ ಅಂತ ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನದ ನಿರ್ದೇಶಕ ಸೂರ್ಯ ಸೇನ್‌ ಹೇಳಿದ್ದಾರೆ. ನಿಮ್ಮ​ಬಸ್ ಆ್ಯಪ್​ನಲ್ಲಿ ಬಿಎಂಟಿಸಿ ಬಸ್​ಗಳ ಕ್ಷಣ ಕ್ಷಣದ ಸಂಚಾರ ವಿವರ, ತುರ್ತು ಪರಿಸ್ಥಿತಿಯ ವೇಳೆ SOS ಎಚ್ಚರಿಕೆಯ ಸೌಲಭ್ಯ ಲಭ್ಯವಿರಲಿದೆ. ಪ್ರಯಾಣಿಕರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಬಳಸಿಕೊಂಡು ಸೈನ್ ಅಪ್ ಮಾಡಿ ಬಳಸಬಹುದು. ಈ ಆ್ಯಪ್ ಪ್ರಸ್ತುತ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply