ನಮ್ಮ ತಪ್ಪು ಮತ್ತೆ ರಿಪೀಟ್‌ ಆಗಲ್ಲ ಅಂದ ಬೋಯಿಂಗ್‌ ಕಂಪನಿ CEO!

masthmagaa.com:

ಬೋಯಿಂಗ್ 737 ಮ್ಯಾಕ್ಸ್‌‌ ವಿಮಾನಗಳಲ್ಲಿ ಬೋಲ್ಟ್‌ಗಳು ಲೂಸಾಗಿದ್ರ ಬಗ್ಗೆ ಬೋಯಿಂಗ್‌ ಈಗ ಕ್ಷಮೆ ಕೇಳಿದೆ. ನಮ್ಮಿಂದ ತಪ್ಪಾಗಿದೆ, ಇನ್ಮೇಲೆ ಈ ರೀತಿ ಆಗದಂತೆ ನೋಡಿಕೊಳ್ತೀವಿ ಅಂತ ತಮ್ಮ ಸ್ಟಾಫ್‌ ಮುಂದೆ ಬೋಯಿಂಗ್‌ ಸಿಇಒ ಡೇವ್‌ ಕ್ಯಾಲ್ಹೌನ್ ಹೇಳಿದ್ದಾರೆ. ಒಳ್ಳೇ ಮಕ್ಕಳು ಸ್ಕೂಲ್‌ಲ್ಲಿ ಟೀಚರ್‌ ಮುಂದೆ ಹೇಳಿದಂತೆ, ವಿಮಾನ ತಯಾರಕ ಕಂಪನಿಯೊಂದರ ಸಿಇಓ ಸೇಫ್ಟಿ ವಿಚಾರದ ಬಗ್ಗೆ ತಪ್ಪಾಯ್ತು ಸಾರಿ ಅಂದಿದಾರೆ. ಅಂದ್ಹಾಗೆ ಹಾರಾಟದ ವೇಳೆ ಬೋಯಿಂಗ್ 737 ಮ್ಯಾಕ್ಸ್‌‌ 9 ವಿಮಾನವೊಂದ್ರ ಡೋರ್‌ ಪ್ಯಾನೆಲ್‌ ಕಳಚಿ ಬಿದ್ದು ವಿಮಾನ ಎಮರ್ಜೆನ್ಸಿ ಲ್ಯಾಂಡ್‌ ಆಗಿತ್ತು. ಈ ಘಟನೆ ಬಳಿಕ ಯುನೈಟೈಡ್‌ ಏರ್‌ಲೈನ್ಸ್‌ ವಿಮಾನಗಳ ತಪಾಸಣೆಗೆ ನಡೆಸಿ ಸುಮಾರು ಹತ್ತು ಬೋಯಿಂಗ್ 737 ಮ್ಯಾಕ್ಸ್‌‌ 9 ವಿಮಾನಗಳ ಬೋಲ್ಟ್‌ಗಳು ಲೂಸ್‌ ಆಗಿದ್ವು ಅಂತ ಕಳವಳ ಗೊಂಡಿತ್ತು. ಈ ಹಿನ್ನಲ್ಲೆಯಲ್ಲಿ ಬೋಯಿಂಗ್‌ ಕಂಪನಿ CEO ಈ ರೀತಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply