24 ಕ್ಯಾರೆಟ್​​ ಗೋಲ್ಡ್​ ಐಫೋನ್ ಕಳೆದುಕೊಂಡ ಬಾಲಿವುಡ್‌ ಬೆಡಗಿ !

masthmagaa.com:

ಇಂಡಿಯಾ ಪಾಕಿಸ್ತಾನ್‌ ಮ್ಯಾಚ್‌ ಟೈಮ್‌ನಲ್ಲಿ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ತಮ್ಮ 24 ಕ್ಯಾರೆಟ್​​ ಗೋಲ್ಡ್​ ಐಫೋನ್​ ಕಳೆದುಕೊಂಡಿದ್ದೀನಿ ಅಂತ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಟೋಬರ್​ 14ರಂದು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ ಪಾಕ್‌ ರೋಚಕ ಪಂದ್ಯ ನಡೆದಿದ್ದು ಗೊತ್ತ ಇದೆ. ಈ ಮ್ಯಾಚ್‌ ನೋಡೋಕೆ ಊರ್ವಶಿ ರೌಟೇಲಾ ಕೂಡ ಸ್ಟೇಡಿಯಂಗೆ ಬಂದಿದ್ರು. ಇದೇ ಸಮಯದಲ್ಲಿ ಊರ್ವಶಿ ಅವರ 24 ಕ್ಯಾರೆಟ್​​ ಗೋಲ್ಡ್​ ಐಫೋನ್ ಕಳೆದುಹೋಗಿದೆ.

“ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್​ ಗೋಲ್ಡ್​​ ಐಫೊನ್​ ಕಳೆದು ಹೋಗಿದೆ. ಯಾರಿಗಾದರು ಅದು ಸಿಕ್ಕಿದರೆ ದಯವಿಟ್ಟು ಸಹಾಯ ಮಾಡಿ. ನನ್ನನ್ನು ಸಂಪರ್ಕಿಸಿ” ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಮೋದಿ ಸ್ಟೇಡಿಯಂ ಮತ್ತು ಅಹಮದಾಬಾದ್​ ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply