ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್!

masthmagaa.com:

ಇಂದು ರಾಕಿಂಗ್ ಸ್ಟಾರ್ ಯಶ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಕೆಜಿಎಫ್​-2 ಚಿತ್ರ ತಂಡದಿಂದ ಅಭಿಮಾನಿಗಳಿಗೆ ವಿಶೇಷ್​ ಗಿಫ್ಟ್​ ನೀಡಿದೆ. ಹೊಂಬಾಳೆ ಸಂಸ್ಥೆ ಹೊಸ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿದೆ.

ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳ ಹೊಂಬಾಳೆ ಸಂಸ್ಥೆ ಅಧಿಕೃತ ಖಾತೆಗಳಲ್ಲಿ ಈ ಪೋಸ್ಟರ್ ಅನ್ನ ಪೋಸ್ಟ್​ ಮಾಡಿ ಯಶ್​ಗೆ ಶುಭಾಶಯ ಕೋರಲಾಗಿದೆ. ‘ಎಚ್ಚರಿಕೆ, ಮುಂದೆ ಅಪಾಯವಿದೆ ! ನಮ್ಮ ರಾಕಿ ಭಾಯ್​​ಗೆ ಜನ್ಮದಿನದ ಶುಭಾಶಯಗಳು’ ಎಂದು ಹೊಂಬಾಳೆ ಟ್ವೀಟ್​ ಮಾಡಿದೆ. ಪೋಸ್ಟರ್​ ಶೇರ್​​​​​ ಆಗುತ್ತಿದ್ದಂತೆ ಅಭಿಮಾನಿಗಳು ಲೈಕ್​, ಪ್ರತಿಕ್ರಿಯೆಗಳ ಮೂಲಕ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ.
-masthmagaa.com
Contact Us for Advertisement

Leave a Reply