ಬ್ರೆಜಿಲ್‌ನಲ್ಲಿ ಧಾರಾಕಾರ ಮಳೆ: ಪ್ರವಾಹಕ್ಕೆ ಸಿಕ್ಕಿ 11 ಮಂದಿ ಸಾವು!

masthmagaa.com:

ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಇದುವರೆಗೆ ಕನಿಷ್ಠ 11 ಮಂದಿ ಮೃತಪಟ್ಟಿರೋದು ವರದಿಯಾಗಿದೆ. ಭಾರೀ ಮಳೆಯಿಂದಾಗಿ ದಿಢೀರ್‌ ಪ್ರವಾಹ ಉಂಟಾಗಿ, ಭೂಕುಸಿತ ಸಂಭವಿಸಿದೆ. ಪ್ರಮುಖವಾಗಿ ರಿಯೋನ ಉತ್ತರ ಭಾಗದಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಸದ್ಯ ಪ್ರವಾಹದಲ್ಲಿ ಸಿಲುಕಿಕೊಂಡಿರೋರ ರಕ್ಷಣಾ ಕಾರ್ಯಾಚರಣೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply