ಹಂಪ್‌ಬ್ಯಾಕ್ ತಿಮಿಂಗಿಲ ವೀಡಿಯೋ ಮಾಡಿ ತನಿಖೆಗೆ ಒಳಗಾದ ಬ್ರೆಜಿಲ್‌ ಮಾಜಿ ಅಧ್ಯಕ್ಷ!

masthmagaa.com:

ಹಂಪ್‌ಬ್ಯಾಕ್ ತಿಮಿಂಗಿಲವನ್ನ ಹರಾಸ್‌ ಮಾಡಿದ್ದಾರೆ ಅಂತ ಆರೋಪಿಸಿ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್‌ ಬೋಲ್ಸನಾರೊ ವಿರುದ್ಧ ಬ್ರೆಜಿಲ್‌ ಪೊಲೀಸ್‌ ತನಿಖೆ ನಡೆಸ್ತಾ ಇದ್ದಾರೆ. ಜೈರ್‌ ಬೋಲ್ಸನಾರೊ ಅವ್ರು ಪಬ್ಲಿಕ್‌ ಹಾಲಿಡೇ ವೇಳೆ ಬ್ರೆಜಿಲ್‌ನ ಸೌತ್‌ ಈಸ್ಟರ್ನ್‌ ಭಾಗದ ಕರಾವಳಿಯಲ್ಲಿ ಜೆಟ್‌ ಸ್ಕೀನಲ್ಲಿ ಕಾಲ ಕಳೆಯುತ್ತಿರೋವಾಗ ಹಂಪ್‌ಬ್ಯಾಕ್ ತಿಮಿಂಗಿಲದ ವೀಡಿಯೋ ಮಾಡಿ ಕಿರುಕುಳ ಕೊಟ್ಟಿದ್ದಾರೆ ಅಂತ ಆರೋಪಿಸಲಾಗಿದೆ. ಅಂದ್ಹಾಗೆ ಕಳೆದ ಜೂನ್‌ ತಿಂಗಳಲ್ಲಿ ಬೋಲ್ಸನಾರೊ ಅವ್ರು ಕೇವಲ 15 ಮೀಟರ್‌ ಅಂತರದಲ್ಲಿ ತಮ್ಮ ಮೊಬೈಲ್‌ನಿಂದ ತಿಮಿಂಗಿಲದ ಏರಿಯಲ್‌ ಬಿಹೇವಿಯರ್ಸ್‌ ಅಂದ್ರೆ ತಿಮಿಂಗಿಲದ ಫ್ಲೈಯಿಂಗ್‌ನ್ನ ಸೆರೆ ಹಿಡಿದಿದ್ದಾರೆ. ಈ ವರ್ತನೆಯನ್ನ ಖಂಡಿಸಿರೋ ಬ್ರೆಜಿಲ್‌ ಪರಿಸರ ಏಜೆನ್ಸಿ, ಈ ರೀತಿಯಾಗಿ ಯಾವುದೇ ಜಲವಾಸಿ ಜೀವಿಗಳಿಗೆ ತೊಂದ್ರೆ ಕೊಡೋದು ಸರಿಯಲ್ಲ. ಇದು ಕಾನೂನು ಪ್ರಕಾರ ಅಪರಾಧ ಅಂತ ಹೇಳಿದೆ. ಇಂತಹ ಅಪರಾಧಗಳಿಗೆ 2 ರಿಂದ 5 ವರ್ಷಗಳ ಕಾಲ ಜೈಲುವಾಸದ ಜೊತೆಗೆ ಫೈನ್‌ ಕೂಡ ಹಾಕಲಾಗುತ್ತೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply