ಕೊರೊನಾ ಸುಳ್ಳು ಸರ್ಟಿಫಿಕೇಟ್‌ ಆರೋಪ! ಬ್ರೆಜಿಲ್‌ ಮಾಜಿ ಅಧ್ಯಕ್ಷರ ಮನೆ ಮೇಲೆ ದಾಳಿ ಮಾಡಿದ ಪೊಲೀಸರು!

masthmagaa.com:

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೇರ್‌ ಬೊಲ್ಸನಾರೋ ಮನೆ ಮೇಲೆ ಅಲ್ಲಿನ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಬೊಲ್ಸನಾರೋಗೆ ಸೇರಿದ ಪೋನ್‌ನ್ನ ವಶಕ್ಕೆ ಪಡೆಯಲಾಗಿದೆ. ಕೊರೊನಾ ಲಸಿಕೆಯನ್ನ ತಾನು ಪಡೆದಿದ್ದೇನೆ ಅಂತ ಸುಳ್ಳು ದಾಖಲೆ ನಿರ್ಮಿಸಿಕೊಂಡಿದ್ದಾರೆ ಅಂತ ಅವರ ವಿರುದ್ದ ಕೇಸ್‌ ದಾಖಲಾಗಿತ್ತು. ಈ ಪ್ರಕರಣದಲ್ಲಿ ತನಿಖೆ ನಡೆಸಲಾಗ್ತಿದೆ. ಅಂದಹಾಗೆ ಕೊರೊನಾದ ಸಂಧರ್ಭದಲ್ಲಿ ಬ್ರೆಜಿಲ್‌ನಲ್ಲಿ ಬೊಲ್ಸನಾರೋ ಅಧ್ಯಕ್ಷರಾಗಿದ್ರು. ಆಗ ಕೊರೊನಾನೇ ಇಲ್ಲ. ನಾನು ಲಸಿಕೆ ಹಾಕಿಸಿಕೊಳ್ಳೋದಿಲ್ಲ ಅಂತೆಲ್ಲಾ ಹೇಳಿದ್ದ ಬೊಲ್ಸನಾರೋ ಬ್ರೆಜಿಲ್‌ನಲ್ಲಿ ಕೊರೊನಾ ನಿಯಂತ್ರಣ ಮಾಡೋಕೆ ಆರಂಭದಲ್ಲಿ ಯಾವುದೇ ಕಾನೂನನ್ನೂ ತಂದಿರಲಿಲ್ಲ. ಆದ್ರೆ ಕೊರೊನಾ ಎಫೆಕ್ಟ್‌ ಶುರುವಾದ್ಮೇಲೆ ಜನರಿಂದ ವಿಪರೀತ ಆಕ್ಷೇಪ ಕೇಳಿ ಬಂತು. ನಿಯಮಗಳನ್ನ ರೂಪಿಸಿ ಅಂತ ಅಲ್ಲಿನ ಜನರು, ಪ್ರತಿಪಕ್ಷಗಳು ಒತ್ತಾಯ ಮಾಡಿದ್ವು. ಒಲ್ಲದ ಮನಸ್ಸಿಂದಲೇ ಬೊಲ್ಸನಾರೋ ಕೂಡ ಲಸಿಕೆ ಮಾಸ್ಕ್‌ ಕಡ್ಡಾಯ ಅಂತ ಹೇಳಿದ್ರು. ಇಷ್ಟಾದ್ರೂ ಬೊಲ್ಸನಾರೋ ಮಾತ್ರ ಕೊರೊನಾನ ನಂಬಿರಲಿಲ್ಲ. ಅಲ್ದೇ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೀನಿ ಅಂತ ಸುಳ್ಳೇಳಿ ಸರ್ಟಿಫಿಕೇಟ್‌ ಮಾಡಿಸಿಕೊಂಡಿದ್ದಾರೆ ಅಂತ ಆರೋಪ ಎದ್ದಿತ್ತು. ಈಗ ಆ ಕೇಸಲ್ಲಿ ತನಿಖೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply