ಬ್ರೆಜಿಲ್‌ಗೆ ಬಂದ್ರೆ ಪುಟಿನ್‌ ಅರೆಸ್ಟ್‌?

masthmagaa.com:

ಜಿ20 ಅಥ್ವಾ ಆಫ್ರಿಕನ್‌ ಒಕ್ಕೂಟದ ಸೇರ್ಪಡೆಯಿಂದ ಈಗ ಜಿ21 ರಾಷ್ಟ್ರಗಳ ಗುಂಪಿನ ಮುಂದಿನ ಶೃಂಗಸಭೆ ಬ್ರೆಜಿಲ್‌ನಲ್ಲಿ ನಡೆಯಲಿದೆ. ಈ ಬಗ್ಗೆ ಮಾತಾಡಿರುವ ಬ್ರೆಜಿಲ್‌ ಅಧ್ಯಕ್ಷ ಲುಲಾ ಅವ್ರು, ಇತ್ತೀಚೆಗೆ ಜಾಗತಿಕ ಸಭೆಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕಾಣಿಸಿಕೊಳ್ತಿಲ್ಲ. ಆದ್ರೆ ನಾವು ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ21 ಶೃಂಗಸಭೆಗೆ ಪುಟಿನ್‌ರನ ಇನ್ವೈಟ್‌ ಮಾಡ್ತೀವಿ. ಬ್ರೆಜಿಲ್‌ಗೆ ಯಾವುದೇ ಭಯವಿಲ್ಲದೆ ಪುಟಿನ್‌ ಬರಬಹುದು ಹಾಗೂ ಅವ್ರನ್ನ ಬಂಧಿಸಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಯುಕ್ರೇನ್‌ ಯುದ್ಧಪರಾಧ ಕೇಸ್‌ಗೆ ಸಂಬಂಧಿಸಿದಂತೆ ಅಂತಾರಾಟಷ್ಟ್ರೀಯ ಕೋರ್ಟ್‌ ಪುಟಿನ್‌ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಪುಟಿನ್‌ ರಷ್ಯಾ ಬಿಟ್ಟು ವಿದೇಶಗಳಿಗೆ ಭೇಟಿ ಕೊಡ್ತಿಲ್ಲ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply