ಚೀನಾಗೆ ಟಕ್ಕರ್‌ ಕೊಡಲು ಭಾರತೀಯ ಸೈನಿಕರಿಗೆ ಮ್ಯಾಂಡರಿನ್‌ ಭಾಷೆ ಕಲಿಸುತ್ತಿದೆ ಭಾರತ!

masthmagaa.com:

ಭಾರತೀಯ ಸೇನೆಯು ತನ್ನ ಸೈನಿಕರಿಗೆ ಚೈನೀಸ್ ಭಾಷೆ ಮ್ಯಾಂಡರಿನ್ ಕಲಿಸುವ ಕೋರ್ಸ್‌ಗಳ ಸಂಖ್ಯೆ ಜಾಸ್ತಿ ಮಾಡಿರೋದು ಗೊತ್ತಾಗಿದೆ. ಇಲ್ಲಿಯವರೆಗೆ ಪಂಚಮರ್ಹಿಯಲ್ಲಿರುವ ಆರ್ಮಿಯ ಎಜುಕೇಷನಲ್ ಕಾರ್ಪ್ಸ್‌ನ ಪ್ರಧಾನ ಕಛೇರಿಯಲ್ಲಿ ಮಾತ್ರ ಮ್ಯಾಂಡರಿನ್ ಭಾಷೆಯ ಒಂದು ಕೋರ್ಸ್ ಅನ್ನ ನಡೆಸಲಾಗುತ್ತಿತ್ತು. ಈ 6 ತಿಂಗಳ ಕೋರ್ಸ್‌ನಲ್ಲಿ 10 ಅಧಿಕಾರಿಗಳು ಮತ್ತು 30 ಸೈನಿಕರಿಗೆ ಮ್ಯಾಂಡರಿನ್ ಭಾಷೆಯನ್ನು ಕಲಿಸಲಾಗುತ್ತದೆ. ಆದರೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ, ಸೇನೆ ಈಗ ಅಂತಹ ಕೋರ್ಸ್‌ಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿದೆ. ಕೋರ್ಸ್ ಮುಗಿದ ನಂತರ, ಕೆಲವು ಅಧಿಕಾರಿಗಳು ಮತ್ತು ಯೋಧರನ್ನ ಸ್ನಾತಕೋತ್ತರ ಕೋರ್ಸ್‌ಗೆ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ದೆಹಲಿ ಮೂಲದ ಫಾರಿನ್‌ ಲಾಂಗ್ವೇಜ್‌ ಸಂಸ್ಥೆಯಲ್ಲಿ ಆಯ್ದ ಅಧಿಕಾರಿಗಳಿಗೆ ಟ್ರೈನಿಂಗ್‌ ಕೊಡಲಾಗುತ್ತದೆ ಅಂತ ತಿಳಿದು ಬಂದಿದೆ. ಅಂದ್ಹಾಗೆ ಭಾರತ ಹಾಗೂ ಚೀನಾ ನಡುವೆ ಘರ್ಷಣೆ ಉಂಟಾದಾಗ ಶಸ್ತ್ರಾಸ್ತ್ರಗಳನ್ನ ಬಳಸೋದಿಲ್ಲ. ಮುಷ್ಠಿಯುದ್ದ ಮಲ್ಲಯುದ್ದ ನಡೆಯುತ್ತೆ. ಈ ಕಾರಣಕ್ಕೆ ಭಾರತೀಯ ಸೈನಿಕರಿಗೆ ಮ್ಯಾಂಡರಿನ್ ಕಲಿಸಲಾಗುತ್ತಿದೆ. ಇದರಿಂದ ಗಡಿಯಲ್ಲಿ ಚೀನಾದ ಸೈನಿಕರು ಏನ್‌ ಮಾತನಾಡ್ತಾರೆ ಅನ್ನೋದನ್ನ ತಿಳಿದುಕೊಳ್ಳಬೋದು. ಇಷ್ಟು ದಿನ ಉನ್ನತ ಅಧಿಕಾರಿಗಳಿಗೆ ಮಾತ್ರ ಇದರ ಬಗ್ಗೆ ತರಬೇತಿ ಕೊಡಲಾಗ್ತಿತ್ತು. ಆದ್ರೆ ಈಗಸಾಮಾನ್ಯ ಸೈನಿಕರಿಗೂ ಅವರ ಭಾಷೆಯ ಪರಿಚಯ ಆದ್ರೆ ಅವರ ಮಾತುಕತೆ ಮೇಲೆ ನಿಗಾ ಇಡಬೋದು ಅಂತ ಹೇಳಲಾಗಿದೆ. ಈ ಉದ್ದೇಶದ ಜೊತೆಗೆ ಗಡಿಯಲ್ಲಿ ಏನಾದ್ರೂ ಸಂಘರ್ಷ ಉಂಟಾದ್ರೆ ಆಗ ಅಲ್ಲೇ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳೋಕೂ ಇದು ಹೆಲ್ಪ್‌ ಆಗುತ್ತೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply