ಲೈಂಗಿಕ ದೌರ್ಜನ್ಯದ ಆರೋಪಿಗೆ ಕುಸ್ತಿಪಟುಗಳ ಸನ್ಮಾನ ಮಾಡಲು ಆಹ್ವಾನ!

masthmagaa.com:

ಕರಾವಳಿ ಕ್ರೀಡೆ ರಾಜಧಾನಿ ಬರ್ತಿದೆ ಅಂತ ಸಖತ್‌ ಸುದ್ದಿ ಮಾಡುತ್ತಿದ್ದ ಬೆಂಗಳೂರು ಕಂಬಳ ಆರಂಭದಲ್ಲೇ ವಿವಾದಕ್ಕೀಡಾಗಿದೆ. ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರೋ, ಸಂಸದ, ಮಾಜಿ WFI ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ನನ್ನ ಬೆಂಗಳೂರಿನ ಕಂಬಳದಲ್ಲಿ ಕುಸ್ತಿ ಪಟುಗಳಿಗೆ ಸನ್ಮಾನ ಮಾಡೋಕೆ ಬನ್ನಿ ಅಂತ ನಿನ್ನೆ ಆಹ್ವಾನ ನೀಡಲಾಗಿತ್ತು. ಇದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾದಾಗ ಆಯೋಜಕರಾದ ಶಾಸಕ ಅಶೋಕ್‌ ರೈ “ಗೋವಾದಲ್ಲಿ ನಡೆದ ನ್ಯಾಷನಲ್‌ ಗೇಮ್ಸ್‌ನಲ್ಲಿ ರಾಜ್ಯದ ಕುಸ್ತಿಪಟುಗಳು ಮೆಡಲ್‌ ಗೆದ್ದಿದ್ದಾರೆ. ಅವರಿಗೆ ಅವಕಾಶ ಸಿಕ್ಕಿದ್ದೆ ವ್ರೆಸ್ಟ್ಲಿಂಗ್‌ ಫೆಡರೇಷನ್‌ ಇಂದ. ಹಾಗಾಗಿ ಬ್ರಿಜ್‌ ಭೂಷಣ್‌ ಅವ್ರೇ ಸನ್ಮಾನ ಮಾಡೋದು ಸರಿ, ಅಲ್ಲದೆ ಸಿದ್ದಿ ಜನಾಂಗದ ಸಂಘಟನೆಯವ್ರು ಬ್ರಿಜ್‌ ಭೂಷಣ್‌ರನ್ನೇ ಕರೀಬೇಕು ಅಂತ ಕೇಳಿದ್ದಾರೆ” ಅಂತ ಸಮರ್ಥನೆ ಮಾಡ್ಕೊಂಡಿದ್ರು. ಆದ್ರೆ ಭಾರಿ ವಿರೋಧದ ನಂತ್ರ ಬ್ರಿಜ್ ಭೂಷಣ್‌ಗೆ ನೀಡಿದ್ದ ಆಹ್ವಾನ ರದ್ದುಗೊಳಿಸಲಾಗಿದೆ. ಈ ಬಗ್ಗೆ ಕಂಬಳ ಸಮಿತಿ ಬ್ರಿಜ್‌ ಭೂಷಣ್‌ಗೆ ಕರೆ ಮಾಡಿ ಪರಿಸ್ಥಿತಿಯ ವಿವರಣೆ ನೀಡಿದೆ. ಹಾಗಾಗಿ ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಅಂತ ಪತ್ರ ಬರೆದು ಬ್ರಿಜ್ ಭೂಷಣ್ ಶುಭಾಶಯ ತಿಳಿಸಿದ್ದಾರೆ ಅಂತ ತಿಳಿದು ಬಂದಿದೆ. ಅಂದ್ಹಾಗೆ ಈ ವಾರಾಂತ್ಯದಲ್ಲಿ ಅಂದ್ರೆ 25 ಹಾಗೂ 26ರ‌ ಶನಿವಾರ ಮತ್ತು ಭಾನುವಾರ ಅರಮನೆ ಮೈದಾನದಲ್ಲಿ ನಡೆಯೋ ಕಂಬಳವನ್ನ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply