ಬ್ರಿಜ್‌ ಭೂಷಣ್‌ Vs ಮಹಿಳಾ ಕುಸ್ತಿಪಟು ಕೇಸ್‌, ದೌರ್ಜನ್ಯ ಮಾಡ್ತಿದ್ದ, ಕಣ್ಣಿಟ್ಟಿದ್ದ: ದಿಲ್ಲಿ ಪೊಲೀಸ್‌

masthmagaa.com:

ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ, ಅವರ ಕೃತ್ಯವನ್ನ ಶಿಕ್ಷಾರ್ಹ ಅಂತ ಚಾರ್ಜ್‌ಶೀಟ್‌ನಲ್ಲಿ ದಿಲ್ಲಿ ಪೊಲೀಸರು ಹೇಳಿದ್ದಾರೆ. ಸಿಂಗ್‌ ವಿರುದ್ದ ಸಲ್ಲಿಸಿರೊ ಚಾರ್ಜ್‌ಶೀಟ್‌ನಲ್ಲಿ ಇದುವರೆಗಿನ ತನಿಖೆಯ ಆಧಾರದ ಮೇಲೆ, 6 ಕುಸ್ತಿಪಟುಗಳು ಮಾಡಿದ ಸ್ಟಾಕಿಂಗ್‌, ಲೈಂಗಿಕ ಕಿರುಕುಳ ಆರೋಪಗಳಿಗೆ ಅವರನ್ನ ವಿಚಾರಣೆಗೆ ಒಳಪಡಿಸಬಹುದು ಹಾಗೂ ಶಿಕ್ಷೆಗೆ ಗುರುಪಡಿಸಬಹುದು ಅಂತ ಹೇಳಲಾಗಿದೆ. ಅಲ್ದೇ ಚಾರ್ಜ್ ಶೀಟ್ ಸುಮಾರು 200 ಸಾಕ್ಷಿಗಳ ಹೇಳಿಕೆಗಳನ್ನ ಒಳಗೊಂಡಿದೆ ಅಂತ ವರದಿಯಾಗಿದೆ. ಅಂದ್ಹಾಗೆ ಸಿಂಗ್‌ ವಿರುದ್ಧ ದಾಖಲಾಗಿರೋ 6 ಕೇಸ್‌ಗಳಲ್ಲಿ 354, 354A ಹಾಗೂ 354D ಸೆಕ್ಷನ್‌ಗಳು ಅನ್ವಯವಾಗುತ್ತವೆ. ಒಂದ್‌ ವೇಳೆ ಅಪರಾಧ ಸಾಬೀತಾದರೆ, 5 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಚಾನ್ಸ್‌ ಇದೆ. ಇನ್ನು ಸಿಂಗ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಸುದೀರ್ಘ ಪ್ರತಿಭಟನೆ ಮಾಡಿದ್ರು. ಬಳಿಕ ಸುಪ್ರೀಂಕೋರ್ಟ್ ಮಧ್ಯ ಪ್ರವೇಶದ ನಂತರ ದಿಲ್ಲಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ರು. ಇನ್ನು ಜುಲೈ 7 ರಂದು ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಸಿಂಗ್ ಅವರಿಗೆ ಸಮನ್ಸ್ ನೀಡಿತ್ತು. ಕೋರ್ಟ್ ನೀಡಿದ ಸಮನ್ಸ್‌ನಲ್ಲಿ ಜುಲೈ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply