ಹಣ ಕೊಟ್ಟು ನಿರಾಶ್ರಿತರೊಬ್ಬರನ್ನ ಗಡಿಪಾರು ಮಾಡಿದ ಬ್ರಿಟನ್‌!

masthmagaa.com:

ಅಕ್ರಮ ವಲಸಿಗರ ಕಾಟದಿಂದ ಬೇಸತ್ತಿರೋ ಬ್ರಿಟನ್‌ ಅವ್ರನ್ನ ಸಾಗಾಕೋಕೆ ನಾನಾ ಪ್ರಯತ್ನ ಮಾಡ್ತಿದೆ. ಇದೀಗ ಇದೇ ಮೊದಲ ಬಾರಿಗೆ ತನ್ನ ವಾಲಂಟರಿ ಸ್ಕೀಮ್‌ ಅಡಿಯಲ್ಲಿ ನಿರಾಶ್ರಿತರೊಬ್ಬರನ್ನ ರುವಾಂಡಾಗೆ ಕಳಿಸಿದೆ. ನೆನಪಿರ್ಲಿ ಈ ಸ್ಕೀಂ ಬೇರೆ ಬಲವಂತವಾಗಿ ಓಡಿಸ್ಬೇಕು ಅನ್ಕೊಂಡಿರೋ ಸ್ಕೀಂ ಬೇರೆ. ಯಾಕಂದ್ರೆ ಈ ವಾಲಂಟರಿ ಸ್ಕೀಮ್‌ ಅಡಿಯಲ್ಲಿ ಅವ್ರಾಗಿನೇ ನಾವು ಬ್ರಿಟನ್‌ ಬಿಟ್ಟು ರುವಾಂಡಗೆ ಹೋಗ್ತಿವೆ ಅಂತ ಮುಂದೆ ಬಂದ್ರೆ ದುಡ್ಡು ಕೊಡ್ತಾರೆ. ಒಬ್ಬೊಬ್ಬ ನಿರಾಶ್ರಿತರಿಗೆ 3,747 ಡಾಲರ್‌ ಅಂದ್ರೆ ಸುಮಾರು 3.12 ಲಕ್ಷ ರೂಪಾಯಿ ಹಣ ಸಿಗುತ್ತೆ. ಇನ್ನು ಬಲವಂತವಾಗಿ ಗಡೀಪಾರು ಮಾಡೋ ಯೋಜನೆಗೆ ಸುದೀರ್ಘ ಸರ್ಕಸ್‌ ನಂತ್ರ ಕಳೆದ ವಾರವಷ್ಟೇ ಬ್ರಿಟನ್‌ ಪಾರ್ಲಿಮೆಂಟ್‌ನಲ್ಲಿ ಅನುಮತಿ ಸಿಕ್ತು. ಇನ್ನ ನಾಲ್ಕೈದು ತಿಂಗಳಲ್ಲಿ ಆ ಯೋಜನೆ ಕೂಡ ಶುರುವಾಗುತ್ತೆ. ಒಂದು ಅಂದಾಜಿನ ಪ್ರಕಾರ ಕೇವಲ 2022 ಜನವರಿ 1ರ ನಂತರನೇ ಸುಮಾರು 50 ಸಾವಿರ ಅಕ್ರಮ ವಲಸಿಗರು ಬ್ರಿಟನ್‌ಗೆ ಕಾಲಿಟ್ಟಿದ್ದಾರೆ.

-masthmagaa.com

Contact Us for Advertisement

Leave a Reply