ರಾಮಮಂದಿರ ಬಗ್ಗೆ BBC ತಪ್ಪು ವರದಿ: ಬ್ರಿಟನ್‌ ಎಂಪಿಯ ತರಾಟೆ

masthmagaa.com:

ರಾಮಮಂದಿರದ ಬಗ್ಗೆ ಪಕ್ಷಪಾತದ ರಿಪೋರ್ಟಿಂಗ್‌ ಮಾಡಿದ್ದಕ್ಕೆ ಬ್ರಿಟನ್‌ನ BBC ಸಂಸ್ಥೆ ಮುಖಭಂಗ ಅನುಭವಿಸಿದೆ. ಖುದ್ದು ಬ್ರಿಟಿನ್‌ ಪಾರ್ಲಿಮೆಂಟ್‌ನ ಸಂಸದರೊಬ್ರು BBCಗೆ ಉಗಿದು ಉಪ್ಪುಖಾರ ಹಾಕಿದ್ದಾರೆ. ಸಂಸದ ಬಾಬ್‌ ಬ್ಬಾಕ್‌ಮನ್‌, BBC ರಾಮಮಂದಿರವನ್ನ ಮಸೀದಿ ಉರುಳಿಸಿದ ಜಾಗದಲ್ಲಿ ಕಟ್ಟಿದ್ದಾರೆ ಅಂತ ರಿಪೋರ್ಟ್‌ ಮಾಡಿದೆ. ಆ ಜಾಗದಲ್ಲಿ 2 ಸಾವಿರ ವರ್ಷಗಳಿಂದ ದೇವಸ್ಥಾನ ಇದ್ದ ವಿಚಾರವನ್ನ ಹೇಳಿಲ್ಲ. ಆ ಜಾಗ ಶ್ರೀರಾಮನ ಜನ್ಮ ಸ್ಥಳ. ರಾಮಂದಿರ ಉದ್ಘಾಟನೆ ಕಾರ್ಯಕ್ರಮ ವಿಶ್ವದ ಎಲ್ಲಾ ಹಿಂದೂಗಳಿಗೂ ಸಡಗರದ ಹಬ್ಬವಾಗಿತ್ತು. ಆದ್ರೆ BBC ಇದನ್ನ ಬಯಾಸ್ಡ್‌ ಆಗಿ ವರದಿ ಮಾಡಿದೆ. ಮುಸ್ಲಿಮರಿಗೆ ಪರ್ಯಾಯವಾಗಿ 5 ಎಕ್ರೆ ಜಮೀನು ಕೊಟ್ಟ ವಿಚಾರ ಹೇಳ್ಬೋದಿತ್ತಲ್ಲ. BBC ಪ್ರಪಂಚದಲ್ಲಿ ಏನು ನಡೀತಿದೆ ಅನ್ನೋದ್ರ ಬಗ್ಗೆ ಸರಿಯಾದ ದಾಖಲೆ ನೀಡಿ ವರದಿ ನೀಡ್ಬೇಕುʼ ಅಂತ ಬ್ಲಾಕ್‌ಮನ್‌ ಪಾರ್ಲಿಮೆಂಟ್‌ನಲ್ಲಿ ಬುದ್ದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply