ಪಾರ್ಲಿಮೆಂಟ್‌ ಸದಸ್ಯನಿಂದ ನೀಲಿಚಿತ್ರ ವೀಕ್ಷಣೆ! ಬ್ರಿಟನ್‌ ಸಂಸತ್‌ನಲ್ಲಿ ಕೋಲಾಹಲ

masthmagaa.com:

ಭಾರತದಲ್ಲಿ ಆಗಾಗ ಕೇಳಿ ಬರುವ ಈ ರಾಜಕೀಯ ನಾಯಕರ ಸದನದಲ್ಲಿನ ನೀಲಿಚಿತ್ರ ಕೇಸುಗಳು ಈಗ ಬ್ರಿಟನ್‌ ಪಾರ್ಲಿಮೆಂಟ್‌ನಲ್ಲೂ ರಿಪೀಟ್‌ ಆಗಿದೆ. ಪಾರ್ಲಿಮೆಂಟ್‌ನಲ್ಲಿ ಕುಳಿತು ನೀಲಿ ಚಿತ್ರ ವೀಕ್ಷಣೆ ಮಾಡಿದ್ರು ಅಂತ ಅಲ್ಲಿನ ಸದಸ್ಯರೊಬ್ಬರ ಮೇಲೆ ಬ್ರಿಟಿಷ್ ಸಂಸದರೊಬ್ಬರು ದೂರು ನೀಡಿದ್ದಾರೆ. ಆದ್ರೆ ಆ ಸದಸ್ಯ ಯಾರು? ಅವರ ಮೇಲೆ ಆರೋಪ ಮಾಡಿದ್ದು ಯಾರು ಅನ್ನೋದನ್ನ ಮಾತ್ರ ಬಹಿರಂಗ ಪಡಿಸಿಲ್ಲ. ರೇಡಿಯೋಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅಲ್ಲಿನ ಅಟಾರ್ನಿ ಜನರಲ್‌ ಸುಯಿಲ್ಲಾ ಬ್ರವರ್ಮಾನ್‌ ಚಿತ್ರ ವೀಕ್ಷಸುತ್ತಿದ್ದ ಆ ವ್ಯಕ್ತಿಯ ಹಿಂದೆ ಕೂತಿದ್ದ ಮಹಿಳಾ ಸದಸ್ಯರಿಂದ ನಮಗೆ ದೂರು ಬಂದಿದೆ. ಇದೊಂದು ನಾಚಿಕೆಗೇಡಿನ ಸಂಗತಿ, ಇಂತಹ ಅನುಚಿತ ವರ್ತನೆಗಳು ಈಗ ತುಂಬಾ ಹೆಚ್ಚಾಗ್ತಿದೆ. ಕೆಲವರಂತೂ ಮನುಷ್ಯರು ಅಂತ ಅನ್ನೋಸೋದೆ ಇಲ್ಲ. ಪ್ರಾಣಿಗಳ ಥರ ನಡ್ಕೋತ್ತಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಆ ಆರೋಪಿ ಸಂಸದರ ಹೆಸರು ಹೇಳಿಲ್ಲವಾದ್ರೂ ಅವರು ಆಡಳಿತ ರೂಢ ಬ್ರಿಟಿಷ್‌ ಕನ್ಸರ್ವೇಟಿವ್‌ ಪಾರ್ಟಿ ಮೆಂಬರ್‌ ಅಂತ ಮಾಹಿತಿ ಸಿಕ್ಕಿದೆ. ಈಗಾಗಲೇ ಹಲವು ಪ್ರಕರಣಗಳಿಂದ ಪ್ರತಿಪಕ್ಷಗಳಿಗೆ ಆಹಾರವಾಗಿರೋ ಬೋರಿಸ್‌ ಜಾನ್ಸನ್‌ ಸರ್ಕಾರಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ. ಈ ಬಗ್ಗೆ ಮಾತಾಡಿರುವ ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ ʼ ಇದನ್ನ ಯಾರೇ ಮಾಡಿದ್ರು ಖಂಡಿತಾ ಒಪ್ಪಿಕೊಳ್ಳೊಕಾಗಲ್ಲ. ಕೆಲಸ ಮಾಡೋ ಸ್ಥಳದಲ್ಲಿ ಇದೆಲ್ಲಾ ಮಾಡ್ಬಾರ್ದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply