ಲೋಕಸಭೆ ಚುನಾವಣೆ 2024: BSP ಪ್ರಧಾನಿ ಅಭ್ಯರ್ಥಿ ಮಾಯಾವತಿ!

masthmagaa.com:

ಬಹುಜನ ಸಮಾಜ ಪಕ್ಷ (BSP) ತನ್ನ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನ 2024ರ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸೋಕೆ ನಿರ್ಧರಿಸಿದೆ ಅಂತ ತಿಳಿದು ಬಂದಿದೆ. ಇದೇ ವೇಳೆ BSP ಯಾವುದೇ ವಿರೋಧ ಪಕ್ಷದ ಮೈತ್ರಿಗೆ ಸೇರೋದಿಲ್ಲ. ಆದ್ರೆ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎನ್ನಲಾಗಿದೆ. ಇನ್ನು BSP ಹಿರಿಯ ನಾಯಕ ಭೀಮರಾವ್ ಅಂಬೇಡ್ಕರ್ ಮಾತನಾಡಿ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪ್ರತಿಪಕ್ಷಗಳ ನಾಯಕರು ವಿವಿಧ ರಾಜ್ಯಗಳಲ್ಲಿ ಸಭೆಗಳನ್ನ ನಡೆಸುತ್ತಿದ್ದಾರೆ. ಹಲವಾರು ಸುತ್ತಿನ ಸಭೆಗಳ ನಂತರವೂ ವಿರೋಧ ಪಕ್ಷದಿಂದ ಯಾರು ಪ್ರಧಾನಿ ಅಭ್ಯರ್ಥಿಯಾಗ್ತಾರೆ ಅನ್ನೋದು ಸ್ಪಷ್ಟವಾಗಿಲ್ಲ. ಆದ್ರೆ BSP ತನ್ನ ಮುಖ್ಯಸ್ಥೆಯನ್ನ ಪ್ರಧಾನಿ ಅಭ್ಯರ್ಥಿ ಅಂತ ಬಿಂಬಿಸೋಕೆ ನಿರ್ಧಾರ ಮಾಡಿದೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply