ಚುನಾವಣಾ ರಾಜಕೀಯದಿಂದ ಬಿಎಸ್‌ವೈ ನಿವೃತ್ತಿ, ಶಿಕಾರಿಪುರದಲ್ಲಿ ಇನ್ಮೇಲೆ ವಿಜಯೇಂದ್ರ ಸ್ಪರ್ದೆ!

masthmaga.com:

ರಾಜ್ಯ ರಾಜಕಾರಣದ ಮಟ್ಟಿಗೆ ಅದ್ರಲ್ಲೂ ವಿಶೇಷವಾಗಿ ಬಿಜೆಪಿ ಪಕ್ಷದ ಮಟ್ಟಿಗೆ ಇವತ್ತು ಒಂದು ದೊಡ್ಡ ಅಧ್ಯಾಯವೇ ಮುಗಿದಿದೆ. ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬೂಕನಕರೆ ಸಿದ್ದಲಿಂಗಪ್ಪ ಯಡಿಯೂರಪ್ಪ್ ಅಥವಾ ಶಾರ್ಟ್‌ ಆಗಿ ಬಿಎಸ್‌ವೈ ತಾವು ಚುನಾವಣಾ ರಾಜಕಾರಣದಿಂದ ನಿವೃತ್ತಿ ತಗೋಳ್ತಿರೋದಾಗಿ ಅನೌನ್ಸ್‌ ಮಾಡಿದ್ದಾರೆ. ಅಂದ್ರೆ ಮುಂದಿನ ಚುನಾವಣೆಗೆ ಸ್ಪರ್ಧಿಸೋಲ್ಲ ಅಂತ ಖಚಿತ ಪಡಿಸಿದ್ದಾರೆ. ಜೊತೆಗೆ ತಮ್ಮನ್ನ ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ಸಾಕಿ, ಸಲುಹಿದ ತಮ್ಮ ಸ್ವಕ್ಷೇತ್ರ ಶಿಕಾರಿಪುರವನ್ನ ತಮ್ಮ ಮಗ ಬಿ.ವೈ ವಿಜಯೇಂದ್ರರಿಗೆ ಬಿಟ್ಟುಕೊಡೋದಾಗಿ ಹೇಳಿದ್ದಾರೆ. ಸ್ನೇಹಿತರೆ ನಿಮಗೆ ಗೊತ್ತಿದ್ದಂತೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನ ಯಡಿಯೂರಪ್ಪ ಬುಡದಿಂದ ಇಲ್ಲಿಯವರೆಗೆ ಕಟ್ಟಿ ಬೆಳಸಿದ್ರು. ಹುಟ್ಟಿ ಬೆಳದದ್ದು ಮಂಡ್ಯ ಜಿಲ್ಲೆ ಬೂಕನಕರೆ. ಫರ್ಸ್ಟ್‌ ಡಿವಿಷನ್‌ ಕ್ಲರ್ಕ್‌ ಆಗಿದ್ರು ಬೇಡ ಅಂತ ಶಿಕಾರಿಪುರಕ್ಕೆ ಹೋಗಿ ಅಲ್ಲಿಯೇ ನೆಲಸಿದ್ರು. ಮೂಲತಃ ಆರ್‌ಎಸ್‌ಎಸ್‌ ಸದಸ್ಯರಾಗಿದ್ರಿಂದ ಜನಸಂಘದಿಂದ ಹಿಡಿದು ಬಿಜೆಪಿಯನ್ನ ತಳಮಟ್ಟದಿಂದ ಬೆಳಸಿದ್ರು. ಮೊದ್ಲು ಪಟ್ಟಣ ಪಂಚಾಯ್ತಿ ಸದಸ್ಯ ಆಗಿದ್ದ ಬಿಎಸ್‌ವೈ, ನಂತ್ರ ಅಧ್ಯಕ್ಷರಾಗಿ, ಶಾಸಕರಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಆಗಿ, ಅಪೋಷಿಷನ್‌ ಲೀಡರ್‌ ಆಗಿ ಕೊನೆಗೆ ಸಿಎಂ ಕೂಡ ಆಗಿ ಬೆಳೆದ್ರು. ಮೊದ್ಲು ಜೆಡಿಎಸ್‌ ಜೊತೆ 20-20 ಸರ್ಕಾರದಲ್ಲಿ 7 ದಿನ ಸಿಎಂ ಆಗಿದ್ರು ಕೂಡ ಕೊನೆಗೆ 2008ರಲ್ಲಿ ಪೂರ್ಣ ಪ್ರಮಾಣದ ಮುಖ್ಯಮಂತ್ರಿ ಆದ್ರು. ಈ ವೇಳೆ ಆರಂಭದಲ್ಲಿ ಎಲ್ಲಾ ಸರಿಗಿತ್ತಾದ್ರು ಆಮೇಲೆ ಡಿನೊಟಿಫಿಕೇಷನ್‌ ಭೂಹಗರಣ, ಅಕ್ರಮ ಗಣಿಗಾರಿಕೆ ಬಿಎಸ್‌ವೈ ಸರ್ಕಾರವನ್ನ ಅಲ್ಲಾಡಿಸಿ ಬಿಡ್ತು. 2011ರಲ್ಲಿ ರಿಸೈನ್‌ ಮಾಡಿ ನಂತ್ರದ ವರ್ಷದಲ್ಲಿ ಬಿಜೆಪಿ ಕೂಡ ಬಿಟ್ರು. ಆಮೇಲೆ ಕೆಜೆಪಿ ಕಟ್ಟಿ ಅದ್ರಲ್ಲಿ ವಿಫಲರಾದ್ರು. ಆಗ ಸೆಂಟ್ರಲ್‌ ಬಿಜೆಪಿಯಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ ಬಂದು ಯಡಿಯೂರಪ್ಪರನ್ನ ಮತ್ತೆ ಪಕ್ಷಕ್ಕೆ ವಾಪಸ್‌ ಕರ್ಕೊಂಡು ಬಂದ್ರು. ಮತ್ತೆ ಬಿಜೆಪಿಯನ್ನ ಬಲಪಡಿಸಿದ ಬಿಎಸ್‌ವೈ ಅಧಿಕಾರದ ಅಂಚಿಗೆ ತಗೊಂಡು ಬಂದ್ರು. ಕೊನೆಗೆ ಜೆಡಿಎಸ್-‌ಕಾಂಗ್ರೆಸ್‌ ಮೈತ್ರಿ ಸರ್ಕಾರ ಬಿದ್ದು ಪಕ್ಷೇತರ ಶಾಸಕರ ಬಲದಿಂದ ಮತ್ತೆ ಸಿಎಂ ಆದ್ರು. ಇತ್ತೀಚೆಗೆ ಬಿಜೆಪಿ ರಾಜ್ಯದಲ್ಲಿ ಹೊಸ ನಾಯಕತ್ವ ಬಯಸಿದ್ದಿದ್ರಿಂದ ಮಧ್ಯಂತರದಲ್ಲಿ ರಾಜಿನಾಮೆ ನೀಡಿದ್ರು. ಇದೀಗ ಗೌರವಯುತವಾಗಿ ತಮ್ಮ ಆಕ್ಟಿವ್‌ ಪಾಲಿಟಿಕ್ಸ್‌ಗೆ ರಾಜಿನಾಮೆ ನೀಡಿದ್ದಾರೆ.

ಇನ್ನು ಅತ್ತ ಸುಪ್ರೀಂಕೋರ್ಟ್‌ ಕೂಡ ಬಿಎಸ್‌ವೈ ಅವ್ರಿಗೆ ಬಿಗ್‌ ರಿಲೀಫ್‌ ಕೊಟ್ಟಿದೆ. ಅಕ್ರಮ ಡಿ-ನೋಟಿಫೈ ಪ್ರಕರಣದಲ್ಲಿ ಬಿಎಸ್‌ವೈ ವಿರುದ್ದದ ಕ್ರಿಮಿನಲ್‌ ವಿಚಾರಣೆಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆನೀಡಿದೆ.

-masthmagaa.com

Contact Us for Advertisement

Leave a Reply