ಸಾಲದ ಸುಳಿಯಲ್ಲಿ ಬೈಜೂಸ್‌! ಲೋನ್‌ ಕಟ್ಟಲು ಒದ್ದಾಟ!

masthmagaa.com:

ಬೆಂಗಳೂರು ಮೂಲದ ಸ್ಟಾರ್ಟಪ್ ಎಜುಟೆಕ್‌ ಕಂಪನಿ ಬೈಜೂಸ್‌ಗೆ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಒಂದು ಕಡೆ ಸಾಲದ ಹೊರೆ, ಇನ್ನೊಂದು ಕಡೆ ಅಂದುಕೊಂಡಂತೆ ನಡೆಯದ ಬ್ಯುಸಿನೆಸ್, ಮತ್ತೊಂದ್‌ ಕಡೆ ಹಣಕಾಸು ವರದಿ ಸಲ್ಲಿಸದ ಆರೋಪ. ಅಷ್ಟೆ ಅಲ್ದೆ ತೆರಿಗೆ ವಂಚನೆಯ ಆರೋಪದಲ್ಲಿ ತೆರಿಗೆ ಅಧಿಕಾರಿಗಳಿಂದ ಶೋಧ. ಇದೀಗ 1.2 ಬಿಲಿಯನ್ ಡಾಲರ್ ಅಂದ್ರೆ ಸುಮಾರು 9.8 ಸಾವಿರ ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿರುವ ಬೈಜೂಸ್ 3 ತಿಂಗಳಿಗೊಮ್ಮೆ ಬಡ್ಡಿ ಕಟ್ಟಬೇಕು. ಇವತ್ತು ಅಂದ್ರೆ ಜೂನ್ 5ರಂದು ಬಡ್ಡಿ ಕಟ್ಟಲು ಡೆಡ್​ಲೈನ್. ಬಡ್ಡಿ ಮೊತ್ತ 40 ಮಿಲಿಯನ್ ಡಾಲರ್ ಅಂದರೆ ಸುಮಾರು 328 ಕೋಟಿ ರೂಪಾಯಿ ಕಟ್ಬೇಕಿದೆ ಎನ್ನಲಾಗಿದೆ.  ಬೈಜೂಸ್ ಸಂಸ್ಥೆಗೆ ಸಾಲವನ್ನು ಕೊಟ್ಟಿರುವ ಸಂಸ್ಥೆಗಳು ಯಾವ ಸಂಧಾನಕ್ಕೂ ಜಗ್ಗುತ್ತಿಲ್ಲ. ಸಾಲ ತೀರಿಸಲು ಹೆಚ್ಚು ಸಮಯ ಕೇಳಿದ ಬೈಜೂಸ್​ನ ಮನವಿಯನ್ನ ಸಾಲಗಾರರು ತಿರಸ್ಕರಿಸಿದ್ದಾರೆ. ಈಗ ನಿಗದಿತ ದಿನದೊಳಗೆ, ಅಂದರೆ ಇವತ್ತು ಬೈಜೂಸ್ ಬಡ್ಡಿ ಕಟ್ಟದಿದ್ದರೆ ಲೋನ್ ಡೀಫಾಲ್ಟ್ ಆಗಲಿದೆ.

-masthmagaa.com

Contact Us for Advertisement

Leave a Reply