CAA ನಮ್ಮ ದೇಶದ ಆಂತರಿಕ ವಿಚಾರ: ಅಮೆರಿಕಗೆ ಭಾರತದ ತಿರುಗೇಟು!

masthmagaa.com:

ಚುನಾವಣಾ ಬಾಂಡ್‌ ನಂತರ ಈಗ CAA ಕೂಡ ನ್ಯಾವಿಚಾರ ಯಾಂಗ ಮತ್ತು ಶಾಸಕಾಂಗ ನಡುವಿನ ಸಮರಕ್ಕೆ ಕಾರಣವಾಗಬಹುದು. ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ದ‌ ದಾಖಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್‌ ಮುಂದಾಗಿದೆ. ಈ ಕಾನೂನಿಗೆ ತಡೆ ಕೋರಿ ಸಲ್ಲಿಸಿದ ಅರ್ಜಿಗಳನ್ನ ಮಾರ್ಚ್‌ 19ಕ್ಕೆ ವಿಚಾರಣೆ ನಡೆಸಲಾಗುವುದು ಅಂತ ಸುಪ್ರೀಂಕೋರ್ಟ್‌ ಹೇಳಿದೆ. ಅಂದ್ಹಾಗೆ 2019ರಲ್ಲೆ ಈ CAA ಕಾನೂನು ಸಂಸತ್‌ನಲ್ಲಿ ಪಾಸ್‌ ಆಗಿತ್ತು. ಬಳಿಕ ಇತ್ತೀಚಿಗೆ ಮಾರ್ಚ್‌11 ರಂದು ಮೋದಿ ಸರ್ಕಾರ CAAನ್ನ ದೇಶದ್ಯಂತ ಅಧಿಕೃತವಾಗಿ ಜಾರಿಗೊಳಿಸಿತ್ತು. ಹೀಗಾಗಿ ಸಿಎಎ ಜಾರಿಯನ್ನ ವಿರೋಧಿಸಿ ಕೇರಳ ಮೂಲದ ಇಂಡಿಯನ್‌ ಯುನಿಯನ್‌ ಮುಸ್ಲಿಂ ಲೀಗ್‌ ತುರ್ತು ಅರ್ಜಿ ವಿಚಾರಣೆ ನಡೆಸುವಂತೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸಂಸತ್‌ನಲ್ಲಿ 2019ರಲ್ಲಿ ಈ ಬಿಲ್‌ ಪಾಸಾಗಿನಿಂದ ಇಲ್ಲಿವರೆಗೆ ಸುಮಾರು 200 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ವಿಚಾರಣೆಗೆ ಸದ್ಯ ಸುಪ್ರೀಂಕೋರ್ಟ್‌ ದಿನಾಂಕ ನಿಗದಿ ಮಾಡಿದೆ.

ಇನ್ನು ಅತ್ತ ಸಿಎಎ ಕಾನೂನು ಭಾರತದಲ್ಲಿ ಜಾರಿಯಾಗಿರೋದು ನಮನ್ನ ಬಹಳ ಚಿಂತೆಗೀಡು ಮಾಡಿದೆ ಅಂತ ಅಮೆರಿಕ ಹೇಳಿದ ಬೆನ್ನಲ್ಲೆ ಭಾರತ ರಿಯಾಕ್ಟ್‌ ಮಾಡಿದೆ. ಇದು ನಮ್ಮ ದೇಶದ ಆಂತರಿಕ ವಿಚಾರ ಅಂತ ಅಮೆರಿಕದ ಮುಖಕ್ಕೆ ಹೊಡ್ದಂಗೇಳಿದೆ. ಅಲ್ದೇ ಬಿಟ್ಟಿ(ಅನಗತ್ಯ) ಹೇಳಿಕೆ ನೀಡಿರೋ ಅಮೆರಿಕ ಈ ರೀತಿ ತಪ್ಪು ಅಭಿಪ್ರಾಯ ವ್ಯಕ್ತ ಪಡಿಸಿದೆ. ಭಾರತದ ಸಂಪ್ರದಾಯಗಳ ಬಗ್ಗೆ ಅಲ್ಪ ಸ್ವಲ್ಪ ತಿಳ್ಕೊಂಡಿರೋ ಅಮೆರಿಕದ ಈ ಉಪದೇಶ ನಮಗೆ ಬೇಕಿಲ್ಲ ಅಂತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ಅಮೆರಿಕಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಇನ್ನು ಸಿಎಎ ಕಾನೂನನ್ನ ಕೇರಳದಲ್ಲಿ ಜಾರಿ ಮಾಡಲ್ಲ ಅಂತ ಅಲ್ಲಿನ ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಅಲ್ದೇ ಈ ವಿಚಾರದಲ್ಲಿ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಮೌನವಹಿಸಿದ್ದೇಕೆ? ಅಂತ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply