ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್?‌

masthmagaa.com:

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ 4% DA(dearness allowance ಹಾಗೂ DR(dearness relief) ನೀಡುವುದಾಗಿ ಕೇಂದ್ರ ಕ್ಯಾಬಿನೇಟ್‌ ಅಪ್ರೂವ್‌ ಮಾಡಿದೆ. ಕ್ಯಾಬಿನೇಟ್‌ ಮೀಟಿಂಗ್‌ ನಂತರ ಈ ಕುರಿತು ಹೇಳಿಕೆ ನೀಡಿರುವ ಮಾಹಿತಿ ಮತ್ತು ಪ್ರಸಾರ ಖಾತೆಗಳ ಸಚಿವ ಅನುರಾಗ್‌ ಠಾಕುರ್‌, ಈಗಿನ ಹೆಚ್ಚಳದೊಂದಿಗೆ DA ಹಾಗೂ DR 42% ನಿಂದ 46% ಆಗಿದೆ ಎಂದಿದ್ದಾರೆ. 2023ರ ಜುಲೈ 1ರಿಂದಲೇ ಈ ಹೆಚ್ಚಳ ಅನ್ವಯ ಆಗಲಿದೆ. ಇದರ ಜೊತೆಗೆ ಈಗಾಗಲೇ ಗ್ರೂಪ್‌-C ಹಾಗೂ non-gazetted ಗ್ರೂಪ್‌-B ನೌಕರರಿಗೆ ದೀಪಾವಳಿ ಬೋನಸ್‌ ನೀಡಲಾಗಿದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ ಸಲಹೆ ಮೇರೆಗೆ ಸುಮಾರು ಆರು ರಾಬಿ ಬೆಳೆಗಳಿಗೆ ನೀಡುತ್ತಿದ್ದ MSP ಅನ್ನು ಸಹ ಜಾಸ್ತಿ ಮಾಡಲಾಗಿದೆ ಅಂತ ಠಾಕೂರ್‌ ಹೇಳಿದ್ದಾರೆ. ಐದು ರಾಜ್ಯಗಳ ಚುನಾವಣೆಗೆ ರಂಗ ಸಜ್ಜಾಗುತ್ತಿರೋ ಹೊತ್ತಲ್ಲೇ ಕೇಂದ್ರ ನೌಕರರಿಗೆ ಹಾಗೂ ರೈತರಿಗೆ ಈ ಸಂತೋಷದ ಸುದ್ದಿ ನೀಡಿದೆ.

-masthmagaa.com

Contact Us for Advertisement

Leave a Reply