ಸಿನಿಮಾಟೋಗ್ರಾಫ್‌ ಮಸೂದೆ ತಿದ್ದುಪಡಿಗೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರ! ಪೈರಸಿಗೆ ಬೀಳಲಿದೆ ಬ್ರೇಕ್‌!

masthmagaa.com:

ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ 2023ಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮಸೂದೆ ಸಿನಿಮಾಗಳ ಪೈರಸಿಯಿಂದ ಸಿನಿಮಾ ಇಂಡಸ್ಟ್ರೀಗೆ ಆಗ್ತಿರೋ ನಷ್ಟವನ್ನ ತಡೆಗಟ್ಟಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಅಷ್ಟೇ ಅಲ್ಲದೇ ಸೆನ್ಸಾರ್ ಮಂಡಳಿ ಕೊಡುವ ಚಲನಚಿತ್ರ ಪ್ರಮಾಣಪತ್ರದಲ್ಲೂ ಬದಲಾವಣೆ ಆಗಲಿದೆ. ಜೊತೆಗೆ ಹೊಸದಾಗಿ ಏಜ್‌ ಬೇಸ್ಡ್‌ ಅಂದ್ರೆ ವಯಸ್ಸು ಆಧಾರಿತ ಸರ್ಟಿಫಿಕೇಟ್‌ಗಳನ್ನ ನೀಡಲು ಈ ಮಸೂದೆ ಅನುವು ಮಾಡಿಕೊಡುತ್ತೆ. ಅಂದ್ಹಾಗೆ ಈಗಾಗಲೇ ಯಾವ ವಯಸ್ಸಿನವರು ಎಂತಹ ಸಿನಿಮಾ ನೋಡ್ಬೋದು ಅನ್ನೋದಕ್ಕೆ ಯುಎ, ಯು, ಎ, ಸಿ ಪ್ರಮಾಣಪತ್ರವನ್ನ ಕೊಡಲಾಗ್ತಿದೆ. ಇದೀಗ ಮಸೂದೆಯ ತಿದ್ದುಪಡಿಯಿಂದ ಈ ಪ್ರಮಾಣ ಪತ್ರದಲ್ಲೂ ಬದಲಾವಣೆ ಆಗಲಿದೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಅಂತ ಕೇಂದ್ರ ಮಾಹಿತಿ ಪ್ರಸಾರ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply