ಕೊಹಿನೂರು ವಜ್ರ ಧರಿಸಲ್ಲ ಎಂದ ಬ್ರಿಟನ್‌ ರಾಣಿ ಕ್ಯಾಮಿಲ್ಲಾ ! ಕಾರಣವೇನು?

masthmagaa.com:

ಬ್ರಿಟನ್‌ ರಾಜ ಮೂರನೇ ಚಾರ್ಲ್ಸ್‌ ಅವ್ರ ಪತ್ನಿ ಕ್ಯಾಮಿಲ್ಲಾ ತಮ್ಮ ಪಟ್ಟಾಭಿಷೇಕದ ದಿನ ಕೊಹಿನೂರು ಡೈಮಂಡ್‌ ಇರೋ ಕಿರೀಟವನ್ನ ಧರಿಸದೇ ಇರೋಕೆ ನಿರ್ಧಾರ ಮಾಡಿದ್ದಾರೆ. ಇದ್ರ ಬದ್ಲಾಗಿ ಕ್ವೀನ್‌ ಮೇರಿ ಕಿರೀಟವನ್ನ ಧರಿಸಲಿದ್ದಾರೆ ಅಂತ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ ಮಾಹಿತಿ ನೀಡಿದೆ. ಕೊಹಿನೂರು ವಜ್ರದ ಕುರಿತು ಹಲವಾರು ವಿವಾದಗಳಿದ್ದು, ಭಾರತಕ್ಕೆ ವಾಪಾಸ್‌ ಕೊಡಿ ಅಂತ ಭಾರತ ಡಿಮ್ಯಾಂಡ್‌ ಮಾಡ್ತಿದೆ. ಪಾಕಿಸ್ತಾನ್‌ ಹಾಗೂ ಅಫ್ಘಾನಿಸ್ತಾನ್‌ ಕೂಡ ಕೊಹಿನೂರು ವಜ್ರದ ಮೇಲೆ ತಮ್ಮ ಹಕ್ಕಿದೆ ಅಂತ ಹೇಳುತ್ತವೆ. ಹೀಗಾಗಿ ಈ ನಿರ್ಧಾರ ತೆಗದುಕೊಳ್ಳಲಾಗಿದೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ರಾಣಿ ಕ್ಯಾಮಿಲ್ಲಾ ಅವ್ರ ಪಟ್ಟಾಭಿಷೇಕ ಮೇ 6ರಂದು ವೆಸ್ಟ್‌ಮಿನಿಸ್ಟರ್‌ ಅಬೇಯಲ್ಲಿ ನಡೆಯಲಿದೆ.

-masthmagaa.com

Contact Us for Advertisement

Leave a Reply