ಭಾರತಕ್ಕೆ ಬಂದಾಗ ಹೋಟೆಲ್‌ನ ವಿಶೇಷ ಕೊಠಡಿಯಲ್ಲಿರಲು ಹೆದರಿದ್ರಾ ಕೆನಡಾ PM?

masthmagaa.com:

ಖಲಿಸ್ತಾನಿ ವಿಚಾರವಾಗಿ ಭಾರತ – ಕೆನಡಾ ನಡುವಿನ ರಾಜತಾಂತ್ರಿಕ ಸಮರ ಮುಂದುವರೆದಿದೆ. ಇದೀಗ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಅವ್ರು, ದೆಹಲಿಯ ಲಲಿತ್‌ ಹೋಟೆಲ್‌ನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ್ದ ಪ್ರೆಸಿಡೆನ್ಶಿಯಲ್‌ ಸೂಟ್‌ನಲ್ಲಿ ಅಂದ್ರೆ ವಿಶೇಷ ಹೋಟೆಲ್‌ ರೂಮ್‌ನಲ್ಲಿ ಉಳಿಯಲು ನಿರಾಕರಿಸಿದ್ದರು ಅಂತ ತಿಳಿದು ಬಂದಿದೆ. ಈ ರೂಮ್‌ನಲ್ಲಿ ಪ್ರೊಟೊಕಾಲ್‌ನಂತೆ ಬುಲೆಟ್‌ಪ್ರೂಫ್‌ ಗ್ಲಾಸ್‌, ಜೊತೆಗೆ ಸ್ನೈಪರ್‌ ಗುಂಡುಗಳನ್ನು ತಡೆಯಬಲ್ಲದಂತಹ ಪಾಲಿಕಾರ್ಬೋನೇಟ್‌ ಪಾಸ್ಟಿಕ್‌ ಲೇಯರ್‌ ಅಳವಡಿಸಲಾಗಿತ್ತು. ಆದ್ರೆ ಭಾರತದಲ್ಲಿದ್ದ ಅಷ್ಟು ದಿನವೂ ಈ ವಿಶೇಷ ರೂಮ್‌ಗಳನ್ನ ಬಳಸದ ಟ್ರುಡು ಸಾಮಾನ್ಯ ಕೊಠಡಿಯಲ್ಲೇ ಇದ್ದರು ಎನ್ನಲಾಗಿದೆ. ಅಂದ್ಹಾಗೆ ಎರಡೂ ದೇಶಗಳ ನಡುವೆ ಇರುವ ಉದ್ವಿಗ್ನ ಸಂಬಂಧ ಟ್ರುಡೊ ಅವರಿಗೆ ಎಲ್ಲಿ ಭಾರತ ಗೂಡಚರ್ಯ ಮಾಡ್ಬಹುದೋ ಅನೋ ಆತಂಕಗಳಿದ್ವು. ಹೀಗಾಗಿ ಅವರು ತಮ್ಮ ಭದ್ರತಾ ತಂಡದ ಸೂಚನೆಗಳ ಪ್ರಕಾರ ಭಾರತ ಸಿದ್ದಪಡಿಸಿದ ರೂಮ್‌ ಬದ್ಲು ನಾರ್ಮಲ್‌ ರೂಮ್‌ನಲ್ಲಿ ತಂಗಿರಬಹುದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

ಇನ್ನು ಅತ್ತ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನ್ನ ಭಾರತ ಸರ್ಕಾರದ ಏಜೆಂಟ್‌ಗಳೇ ಹತ್ಯೆ ಮಾಡಿದ್ದಾರೆ ಅಂತ ಆರೋಪ ಮಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, ಯಾವುದೇ ಸೂಕ್ತ ಸಾಕ್ಷ್ಯಾಧಾರ ನೀಡಿಲ್ಲ ಅಂತ ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಾಗ್ಚಿ, ಕೆನಡಾ ಪ್ರಧಾನಿ ಟ್ರುಡು ಹೇಳಿಕೆ ಕೇವಲ ರಾಜಕೀಯ ಪ್ರೇರಿತ ಅಂತ ಚಾಟಿ ಬೀಸಿದ್ದಾರೆ. ಜೊತೆಗೆ ಕೆನಡಾ ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನ ನಮ್ಮ ಬಳಿ ಶೇರ್‌ ಮಾಡಿಲ್ಲ ಅಂತ ಹೇಳಿದ್ದಾರೆ. ಮುಂದುವರೆದು ಕೆನಡಾದಲ್ಲಿ ನಡೆದ ಭಾರತ ವಿರೋಧಿ ಕ್ರಿಮಿನಲ್‌ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಮ್ಮ ಕಡೆಯಿಂದ ಕೆನಡಾ ಅಧಿಕಾರಿಗಳಿಗೆ ಕಂಟಿನ್ಯೂ ಆಗಿ ಎವಿಡೆನ್ಸ್‌ ಕೊಡ್ತಾ ಬಂದಿದಿವಿ. ಆದ್ರೆ ಈ ಬಗ್ಗೆ ಕೆನಡಾ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ದೆ ಹಲವು ಭಯೋತ್ಪಾದಕರಿಗೆ ಕೆನಡಾ ಸ್ವರ್ಗವಾಗ್ತಿದೆ. ಈ ವಿಚಾರವಾಗಿ ಹಲವು ವರ್ಷಗಳಿಂದ ನಾವು ಮಾಹಿತಿ ನೀಡ್ತಾ ಬಂದಿದ್ದು, 20 ರಿಂದ 25 ಭಯೋತ್ಪಾದಕರ ಲಿಸ್ಟ್‌ ಕೊಡಲಾಗಿದೆ. ಆದ್ರೆ ಇದುವರೆಗೂ ಕೆನಡಾ ಯಾವುದೇ ಆಕ್ಷನ್‌ ತೆಗೆದುಕೊಂಡಿಲ್ಲ ಅಂತ ಬಗ್ಚಿ ಮಾಹಿತಿ ನೀಡಿದ್ದಾರೆ.

ಇನ್ನು ಕೆನಡಾ ಪ್ರಜೆಗಳಿಗೆ ನೀಡುವ ವೀಸಾ ಸೇವೆ ನಿಲ್ಲಿಸಿರುವ ಬಗ್ಗೆ ಮಾತಾಡಿರುವ ಬಾಗ್ಚಿ, ಕೆನಡಾದಲ್ಲಿರುವ ನಮ್ಮ ಹೈಕಮಿಷನ್‌ ಕಚೇರಿ ಮತ್ತು ಕೌನ್ಸುಲೇಟ್‌ ಕಚೇರಿಗಳಿಗೆ ಬೆದರಿಕೆ ಇದೆ. ಇದ್ರಿಂದಾಗಿ ಕಾರ್ಯಾಚರಣೆಗೆ ಸಮಸ್ಯೆಯುಂಟಾಗಿದೆ. ಈ ಕಾರಣಕ್ಕೆ ವೀಸಾ ಅರ್ಜಿಗಳ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಂತ ಹೇಳಿದ್ದಾರೆ. ಅಲ್ದೆ ಬೇರೆ ದೇಶಗಳಿಂದ ನಮ್ಮಲ್ಲಿಗೆ ಬರುವ ರಾಜತಾಂತ್ರಿಕ ಸಿಬ್ಬಂದಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ. ಕೆಲವು ದೇಶಗಳಲ್ಲಿ ನಾವು ನಮ್ಮ ರಾಜತಾಂತ್ರಿಕ ಸಿಬ್ಬಂದಿಗಳ ರಕ್ಷಣೆಗೆ ನಮ್ಮದೇ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ ಅಂತಹೇಳಿದ್ದಾರೆ. ಇತ್ತ ಭಾರತದಲ್ಲಿರುವ ಕೆನಡಾ ಹೈಕಮಿಷನ್‌ ಅಧಿಕಾರಿಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಬೆದರಿಕೆ ಹಾಕಲಾಗ್ತಿದೆ. ಈ ಹಿನ್ನಲೆಯಲ್ಲಿ ನಮ್ಮ ಅಧಿಕಾರಿಗಳಿಗೆ ಭಾರತ ಸರ್ಕಾರ ಸೂಕ್ತ ಭದ್ರತೆ ಒದಗಿಸುತ್ತೆ ಎಂದು ನಾವು ಭಾವಿಸುತ್ತೇವೆ ಅಂತ ಕೆನಡಾ ಹೇಳಿದೆ.

-masthmagaa.com

Contact Us for Advertisement

Leave a Reply