ಕೆನಡಾ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಶಂಕಿತರ ಬಂಧನ

masthmagaa.com:

ಭಾರತದಲ್ಲಿ ಚುನಾವಣೆ ನಡೆಯುತ್ತಿರುವ ವೇಳೆಯಲ್ಲೇ ಅತ್ತ ಕೆನಡಾದಲ್ಲಿ ಖಲಿಸ್ತಾನಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಬೆಳವಣೆಯಾಗಿದೆ. ಕಳೆದ ವರ್ಷ ಭಾರತ ಮತ್ತು ಕೆನಡಾ ನಡುವೆ ಬೆಂಕಿ ಹೊತ್ತಿ ಉರಿಯಲು ಕಾರಣವಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಈ ಬೆಳವಣಿಗೆ ಆಗಿದೆ. ಈ ಪ್ರಕರಣದಲ್ಲಿ ಇನ್ವಾಲ್ವ್‌ ಆದ ಕೆಲ ಭಾರತೀಯರನ್ನ ಅರೆಸ್ಟ್‌ ಮಾಡಿರೋದಾಗಿ ಇದೀಗ ಕೆನಡಾ ಹೇಳ್ಕೊಂಡಿದೆ. ಕಮಲ್‌ಪ್ರೀತ್‌ ಸಿಂಗ್‌, ಕರಣ್‌ಪ್ರೀತ್‌ ಸಿಂಗ್‌ ಮತ್ತು ಕರಣ್‌ ಬ್ರಾರ್‌ ಅನ್ನೋರನ್ನ ಕೆನಡಾ ಪೋಲಿಸ್‌ ಅರೆಸ್ಟ್‌ ಮಾಡಿದ್ದು, ಇವ್ರು ಪಂಜಾಬ್‌ ಮತ್ತು ಹರ್ಯಾಣದ ಕುಖ್ಯಾತ ಲಾರೆನ್ಸ್‌ ಭಿಷ್ಣೋಯಿ ಗುಂಪಿಗೆ ಸೇರಿದವ್ರು ಅಂತ ಆರೋಪಿಸಲಾಗಿದೆ. ಅಲ್ಲದೇ ಕಳೆದ ಜೂನ್‌ 18ರಂದು ಉಗ್ರ ನಿಜ್ಜರ್‌ ಹತ್ಯೆಯಾದ ದಿನ ಇವ್ರು ಒಬ್ಬಬ್ರು ಒಂದೊಂದು ಪಾತ್ರ ವಹಿಸಿದ್ರು. ಒಬ್ಬ ಶೂಟರ್‌ ಆಗಿದ್ರೆ…ಮತ್ತೊಬ್ಬ ಡ್ರೈವರ್‌….ಇನ್ನೋಬ್ಬ ಸ್ಪಾಟರ್‌ ಅಂದ್ರೆ ಉಗ್ರ ನಿಜ್ಜರ್‌ನ ಚಲನವಲನದ ಮೇಲೆ ಕಣ್ಣಿಟ್ಟಿದ್ದ. ಭಾರತದ ಗುಪ್ತಚರ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸ ಮಾಡಿದ್ರು ಅಂತ ಕೆನಡಾ ಮಾಧ್ಯಮದಲ್ಲಿ ಅಲ್ಲಿನ ಪೋಲಿಸರು ಆರೋಪಿಸಿದ್ದಾರೆ. 2021ರಲ್ಲಿ ತಾತ್ಕಾಲಿಕ ಸ್ಟೂಡೆಂಟ್‌ ವೀಸಾ ಮೇಲೆ ಕೆನಡಾಗೆ ಬಂದಿದ್ದ ಇವ್ರು ಯಾವುದೇ ರೀತಿಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರ್ಲಿಲ್ಲ. ಕಾಲೇಜುಗಳಿಗೆ ಸೇರಿರ್ಲಿಲ್ಲ ಎನ್ನಲಾಗಿದೆ. ಜೊತೆಗೆ ಕೆಲ ತಿಂಗಳ ಹಿಂದೆನೇ ಈ ಶಂಕಿತರನ್ನ ಕೆನಡಾ ತನಿಕಾಧಿಕಾರಿಗಳು ಪತ್ತೆ ಹಚ್ಚಿದ್ರು…. ಆದ್ರೆ ಅರೆಸ್ಟ್‌ ಮಾಡದೇ, ಇವ್ರ ಮೇಲೊಂದು ನಿಗಾ ಇಟ್ಟಿದ್ರು. ನಂತ್ರ ತಕ್ಕ ಸಾಕ್ಷಿಗಳು ಸಿಕ್ಕಮೇಲೆ ಮೇ 03ರಂದು ಬಂಧಿಸಿದ್ದಾರೆ. ಜೊತೆಗೆ 11 ವರ್ಷದ ಬಾಲಕನ ಹತ್ಯೆ ಸೇರಿದಂತೆ ಕೆನಡಾದಲ್ಲಿ ಇತರೆ ಮೂರು ಹತ್ಯೆಗೂ ಇವ್ರ ಲಿಂಕ್‌ ಇದ್ಯಾ ಅಂತ ತನಿಖೆ ನಡೆಸಲಾಗ್ತಿದೆ ಎನ್ನಲಾಗಿದೆ. ಅಂದ್ಹಾಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು, ಉಗ್ರ ನಿಜ್ಜರ್‌ ಹತ್ಯೆಯಾದಾಗಿನಿಂದ ಭಾರತ ಕಡೆ ಬೆರಳು ಮಾಡಿ ತೋರಿಸ್ತಿದ್ರು. ಆದ್ರೆ ಟ್ರುಡು ಆರೋಪವನ್ನ ಭಾರತ ಖಂಡಿಸ್ತಲೇ ಬಂದಿತ್ತು. ಇತ್ತೀಚೆಗಷ್ಟೇ ಕೆನಡಾದಲ್ಲಿ ನಡೆದ ಸಿಖರ ಈವೆಂಟ್‌ ಒಂದ್ರಲ್ಲೂ ಟ್ರಡು ಅದೇ ಹಳೇ ರಾಗ ಹಾಡಿದ್ರು. ಭಾರತದ ಏಜೆಂಟ್‌ರ ಕೈವಾಡವಿದೆ ಅಂತೇಳಿದ್ರು. ಭಾರತ ಈ ಆರೋಪವನ್ನೂ ರಿಜೆಕ್ಟ್‌ ಮಾಡ್ತು.

-masthmagaa.com

Contact Us for Advertisement

Leave a Reply