ಕ್ರಿಕೆಟ್‌ ವಿಶ್ವಕಪ್‌ ಬದಲು ಭಯೋತ್ಪಾದಕ ಕಪ್‌ ಆಗಲಿದೆ ಎಂದು ಬೆದರಿಕೆ ಹಾಕಿದ ಖಲಿಸ್ತಾನಿ ಉಗ್ರ ಪನ್ನುನ್!

masthmagaa.com

ಖಲಿಸ್ತಾನಿ ವಿಚಾರವಾಗಿ ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿರೋ ನಡುವೆಯೇ ಇದೀಗ ವಿಶ್ವಕಪ್‌ನ ಇಂಡೋ-ಪಾಕ್‌ ಪಂದ್ಯಕ್ಕೆ ಉಗ್ರದಾಳಿಯಿರುವ ಸ್ಪೋಟಕ ಮಾಹಿತಿ ಸಿಕ್ಕಿದೆ. ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಪನ್ನುನ್‌ ವಿಶ್ವಕಪ್‌ಗೆ ಬೆದರಿಕೆ ಒಡ್ಡಿರೋ ಆಡಿಯೋ ಒಂದು ಈಗ ಹೊರಬಿದ್ದಿದೆ. ವಿದೇಶಿ ದೂರವಾಣಿ ಸಂಖ್ಯೆಯಿಂದ ರೆಕಾರ್ಡ್ ಮಾಡಿದ ಆಡಿಯೋ ಬೆದರಿಕೆ ಭಾರತದ ಹಲವರಿಗೆ ಬಂದಿದೆ ಅಂತ ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ. ಈ ಅಡಿಯೋದಲ್ಲಿ “ನಾವು ಶಹೀದ್ ನಿಜ್ಜರ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ. ನಿಮ್ಮ ಬುಲೆಟ್‌ಗಳ ವಿರುದ್ಧ ನಾವು ಬ್ಯಾಲೆಟ್‌ಗಳನ್ನು ಬಳಸಲಿದ್ದೇವೆ. ನಿಮ್ಮ ಹಿಂಸಾಚಾರದ ವಿರುದ್ಧ ನಾವು ಮತ ಚಲಾಯಿಸಲಿದ್ದೇವೆ. ಅಕ್ಟೋಬರ್ 5ನೇ ದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳಿ. ಅದು ವಿಶ್ವಕಪ್ ಕ್ರಿಕೆಟ್‌ನ ಆರಂಭವಲ್ಲ. ಬದಲಾಗಿ ವಿಶ್ವ ಭಯೋತ್ಪಾದನಾ ಕಪ್‌ನ ಆರಂಭ… ಅಂತ ಪನ್ನುನ್ ಸಂದೇಶವನ್ನು ಉಲ್ಲೇಖಿಸಿ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಹೀಗಾಗಿ ಗುಜರಾತ್ ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಅಂತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇತ್ತ ಹತ್ಯೆಯಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೂ ಮೊದಲು ಪದೇ ಪದೇ ಕೆನಾಡದ ಗುಪ್ತಚರ ಅಧಿಕಾರಿಗಳನ್ನ ಭೇಟಿಯಾಗುತ್ತಿದ್ದ ಅಂತ ತಿಳಿದು ಬಂದಿದೆ. ಈ ಬಗ್ಗೆ ನಿಜ್ಜರ್‌ ಪುತ್ರ ಬಾಲರಾಜ್‌ ನಿಜ್ಜರ್‌ ಕೆನಡಾದ ನ್ಯೂಸ್‌ ಚಾನೆಲ್‌ ಒಂದಕ್ಕೆ ತಿಳಿಸಿದ್ದಾನೆ. ವಾರಕ್ಕೆ ಒಂದು ಅಥ್ವಾ ಎರಡು ಬಾರಿ ನಿಜ್ಜರ್‌ ಕೆನಡಾದ ಭದ್ರತಾ ಗುಪ್ತಚರ ಅಧಿಕಾರಿಗಳನ್ನ ಮೀಟ್‌ ಮಾಡ್ತಿದ್ದ ಅಂತ ಬಾಲರಾಜ್‌ ಹೇಳಿದ್ದಾರೆ. ಫೆಬ್ರುವರಿಯಿಂದ ಈ ರೀತಿ ಮೀಟ್‌ ಮಾಡೋದು ಶುರುವಾಗಿದ್ದು, ನಿಜ್ಜರ್‌ಗೆ ಇರುವ ಜೀವ ಬೆದರಿಕೆ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದರು. ಮನೆಯಲ್ಲಿಯೇ ಇರುವಂತೆ ಸಲಹೆ ಕೊಟ್ಟಿದ್ದರು ಅಂತ ಹೇಳಿದ್ದಾರೆ. ಇದನ್ನೆಲ್ಲ ಕೆನಡಾ ಸರ್ಕಾರ ಯಾವ ರೀತಿ ಭಯೋತ್ಪಾದಕರಿಗೆ ಸಪೋರ್ಟ್‌ ಮಾಡ್ತಿದೆ ಅನ್ನೋದು ಸಾಬೀತಾಗ್ತಿದೆ. ಹುಷಾರಾಗಿರಿ ಅಂತ ಹೇಳೋಕೆ ಅವನೇನು ವಿಐಪಿ ನಾ ಅನ್ನೋ ಪ್ರಶ್ನೆ ಬರುತ್ತೆ. ಓರ್ವ ಉಗ್ರ ಅಲ್ಲಿನ ಗುಪ್ತಚರ ಅಧಿಕಾರಿಗಳನ್ನ ಮೀಟ್‌ ಮಾಡ್ತಾನೆ ಅಂದ್ರೆ ಜಸ್ಟಿನ್‌ ಟ್ರುಡು ಸರ್ಕಾರ ಎಷ್ಟರ ಮಟ್ಟಿಗೆ ಭಯೋತ್ಪಾದಕರಿಗೆ ಮಣೆ ಹಾಕ್ತಿದೆ ಅನ್ನೋದು ಸ್ಪಷ್ಟವಾಗ್ತಿದೆ. ಇನ್ನು ನನ್ನ ತಂದೆಗೆ ಹಲವು ಕೊಲೆ ಬೆದರಿಕೆ ಮಸೇಜ್‌ಗಳು ಬಂದಿದ್ದವು. ನೀವು ಖಲಿಸ್ತಾನ್‌ ಬಗ್ಗೆ ಮಾತಾಡುವುದನ್ನ ನಿಲ್ಲಿಸದಿದ್ರೆ ನಾವು ನಿಮ್ಮನ್ನ ಕೊಲ್ಲುತ್ತೇವೆ. ನೀವು ಎಲ್ಲಿ ವಾಸ ಮಾಡ್ತೀರಿ ಅನ್ನೋದು ನಮಗೆ ಗೊತ್ತಿದ್ದು, ಯಾವ ಗುರುದ್ವಾರಕ್ಕೆ ಹೋಗ್ತೀರಿ ಅಂತನೂ ಗೊತ್ತಿದೆ ಅನ್ನೋ ಮೆಸೇಜ್‌ಗಳು ಬರ್ತಿದ್ವು ಅಂತ ಬಾಲರಾಜ್‌ ಹೇಳಿಕೊಂಡಿದ್ದಾನೆ.

-masthmagaa.com

Contact Us for Advertisement

Leave a Reply